ಸತತ ಇಪ್ಪತೈದು ವರ್ಷಗಳಿಂದ ಪ್ರತೀದಿನ 500 ಕ್ಕೂ ಹೆಚ್ಚು ಮಂದಿ ಉಪವಾಸಿಗರಿಗೆ ಇಪ್ತಾರ್ ಏರ್ಪಡಿಸುತ್ತಿರುವ ಅನ್ಸಾರ್ ಮುಸ್ಲಿಮೀನ್ ಅಸೋಸಿಯೇಷನ್
ಸುಳ್ಯ ಗಾಂಧಿನಗರ ಕೆಂದ್ರ ಜುಮ್ಮಾ ಮಸೀದಿಯ ಆವರಣದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ವತಿಯಿಂದ ರಂಜಾನ್ ತಿಂಗಳ ಅಂಗವಾಗಿ ಪ್ರತಿದಿನ ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಲಾಗುತ್ತಿದ್ದು
ಪ್ರತಿದಿನ 500ಕ್ಕೂ ಹೆಚ್ಚು ವೃತದಾರಿಗಳು ಇಫ್ತಾರ್ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.




ಸುಳ್ಯ ಗಾಂಧಿನಗರ ಪರಿಸರದಲ್ಲಿ ಅಲ್ಲಿನ ಪರಿಸರ ವ್ಯಾಪಾರಸ್ಥರಿಗೆ,ವಿದ್ಯಾರ್ಥಿಗಳಿಗೆ,ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಆರಂಭಗೊಂಡು ರಂಜಾನ್ ಇಪ್ತಾರ್ ಕೂಟ ಕಾರ್ಯಕ್ರಮ ನಡೆಯುತ್ತಿದೆ.
ಪ್ರತಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ದಾನಿಗಳ ಸಹಕಾರ ದಿಂದ ಗಾಂಧಿನಗರ ಜಮಾಯತ್ ಕಮಿಟಿ ಸಹಯೋಗದೊಂದಿಗೆ ಪ್ರತಿದಿನ ಐನೂರು ಮಂದಿಗೆ ಇಪ್ತಾರ್ ಕಾರ್ಯಕ್ರಮ ಏರ್ಪಾಡು ಮಾಡುವುತ್ತಾರೆ ಅನ್ಸಾರ್ ಎಲ್ಲಾ ಸದಸ್ಯರು ಈ ಇಪ್ತಾರ್ ಕಾರ್ಯಕ್ರಮಕ್ಕೆ ಸಹಕರಿಸವುದು ತಮ್ಮ ಕೆಲಸಗಳನ್ನು ಬದಿಗೊತ್ತಿ ಇಪ್ತಾರ್ ಕೂಟದಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಾರೆ. ಬಹುತೇಕ ದಿನಗಳಲ್ಲಿ ಅನ್ನಪ್ರಸಾದ ವಿತರಣೆ ಕಾರ್ಯಕ್ರಮವು ಕೂಡ ನಡೆಯುತ್ತದೆ.
ಅನ್ಸಾರ್ ಅಸೋಸಿಯೇಷನ್ ಇಪ್ತಾರ್ ಕೂಟವನ್ನು ಬಹಳ ವರ್ಷಗಳ ಹಿಂದೆ ಸುಳ್ಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಿಸಿದ ವ್ಯವಸ್ಥೆ ಅದರ ಜೊತೆಯಲ್ಲಿ ಪರಿಸರದ ವ್ಯಾಪಾರಿಗಳಿಗೂ ಕೂಲಿ ಕಾರ್ಮಿಕರಿಗೂ ಉಪಾಕರವಾಗಲಿ ಎಂಬ ನಿಟ್ಟಿನಲ್ಲಿ ಆರಂಬಿಸಿದ ಇಪ್ತಾರ್ ಯೋಜನೆ ಇವತ್ತು ಬಹಳ ಅದ್ದೂರಿಯಾಗಿ ವ್ಯವಸ್ಥಿತವಾಗಿ ನಡೆಯುತ್ತಿದೆ ಪ್ರತಿದಿನ ಐನೂರು ಜನ ವೃತದಾರಿಗಳು ಉಪವಾಸ ತೊರೆಯುತ್ತಾರೆ ವಿಶೇಷ ದಿನಗಳಲ್ಲಿ ಒಂದು ಸಾವಿರ ಜನರಿಗೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.ಎಂದು ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ ಪ್ರಧಾನ ಕಾರ್ಯದರ್ಶಿ ಹನೀಫ್ ಬಿಎಂ ಮತ್ತು ಪದಾಧಿಕಾರಿಗಳು ತಿಳಿಸಿದರು.