Home Uncategorized ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ರಾಶಿ ಚಿಂತನೆ ಹಾಗೂ ಸೂಟೆ ಸಮರ್ಪಿಸಿದ ವರಿಗೆ...

ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ರಾಶಿ ಚಿಂತನೆ ಹಾಗೂ ಸೂಟೆ ಸಮರ್ಪಿಸಿದ ವರಿಗೆ ಸನ್ಮಾನ

0

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.15 ರಿಂದ 18 ರ ತನಕ ಜರುಗಿದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ರಾಶಿ ಚಿಂತನೆಯು ಮಾ. 29 ರಂದು ನಡೆಯಿತು.

ಕೇರಳದ ದೈವಜ್ಞರಾದ ಪಂಕಜಾಕ್ಷ ರವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.


ಮಹೋತ್ಸವದ ಕುರಿತು ಪೂರ್ವಾಪರ
ಚಿಂತನೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ಮಾತನಾಡಿ
ಅರಂಬೂರು ದೈವಂಕಟ್ಟು ಮಹೋತ್ಸವದ ಅಧ್ಯಕ್ಷತೆ ವಹಿಸಿಕೊಂಡು ತುಂಬಾ ವಿಚಾರಗಳನ್ನು ಕಲಿತುಕೊಂಡಂತಾಗಿದೆ. ಮಹೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲಾ ವರ್ಗದ ಜನರ ಶ್ರಮ ಸಾಕಷ್ಟಿದೆ. ದೊಡ್ಡ ವ್ಯಕ್ತಿಗಳನ್ನು ನಂಬುವ ಬದಲು ಸಾಮಾನ್ಯ
ಜನರ ಮೇಲೆ ವಿಶ್ವಾಸವಿರಿಸಿದಾಗ ಯಶಸ್ಸು ಖಂಡಿತ ಸಾಧ್ಯ. ಅರಂಬೂರು
ಭಾಗದ ಜನರ ಪ್ರೀತಿ
ವಿಶ್ವಾಸಕ್ಕೆ ಸದಾ ಚಿರ ಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.
ಕೋಶಾಧಿಕಾರಿ ಜತ್ತಪ್ಪ ರೈ ಯವರು ಮಹೋತ್ಸವದ ಅಯ ವ್ಯಯದ ಕುರಿತು ವಿವರ ನೀಡಿದರು. ಬಳಿಕ ದೈವಸ್ಥಾನದಲ್ಲಿ ಸ್ಥಾನಿಕರ‌ ಸಮಕ್ಷಮದಲ್ಲಿ ಪ್ರಾರ್ಥನೆ ನೆರವೇರಿಸಿ ಸೂಟೆ ಸಮರ್ಪಿಸಿದ ಹಿರಿಯರಾದ ಕುಂಞಕಣ್ಣ ಎ. ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ
ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕುಟುಂಬದ ಯಜಮಾನ ಕುಂಞಕಣ್ಣ ಎ, ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ರಧೀಶನ್ ಅರಂಬೂರು, ಕಾರ್ಯಾಧ್ಯಕ್ಷರಾದ ರಾಧಾಕೃಷ್ಣ ಪರಿವಾರಕಾನ, ಕುಂಞರಾಮನ್ ಶ್ರೀ ಶೈಲಂ, ಪದ್ಮಯ್ಯ ಪಡ್ಪು, ಶ್ರೀಪತಿ ಭಟ್ ಮಜಿಗುಂಡಿ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಗೋಕುಲ್ ದಾಸ್ ಸುಳ್ಯ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಪದ್ಮನಾಭ ನಾಯರ್ ಪರಿವಾರಕಾನ, ಶಿವರಾಮ ಗೌಡ ಕಲ್ಲೆಂಬಿ , ಗಣಪತಿ ಭಟ್ ಮಜಿಗುಂಡಿ, ಅಮ್ಮು ರೈ ಅರಂಬೂರು, ದಿನೇಶ್ ಕೋಲ್ಚಾರು, ನಾರಾಯಣ ನಾಯ್ಕ ಅರಂಬೂರು, ಶಿವ ಶಂಕರ ನಾಯಕ್ ಪಾಲಡ್ಕ, ಕುತ್ತಿಕೋಲು
ಕ್ಷೇತ್ರದ ಅಧ್ಯಕ್ಷ ಆರ್.ಕುಂಞಕಣ್ಣನ್ ಬೇಡಗಂ, ಪ್ರಧಾನ ಕಾರ್ಯದರ್ಶಿ ಕುಂಞಕೃಷ್ಣನ್,
ಕೋಶಾಧಿಕಾರಿ ಶ್ರೀಧರನ್ ಪರಯಂಪಳ್ಳ, ಸುದೇಶ್ ಅರಂಬೂರು, ಚಂದ್ರಶೇಖರ ನೆಡ್ಚಿಲು, ಅನಿಲ್ ಕೆ.ಸಿ ಪರಿವಾರಕಾನ, ಗಂಗಾಧರ ಎನ್.ಎ, ರತ್ನಾಕರ ರೈ, ನಾರಾಯಣ ರೈ ಅರಂಬೂರು, ಶಿವರಾಮ ರೈ ಅರಂಬೂರು, ನಾರಾಯಣ ಪರಿವಾರಕಾನ ಮತ್ತಿತರರು
ಉಪಸ್ಥಿತರಿದ್ದರು.

ಭಾರತೀಯ ತೀಯಾ ಸಮಾಜ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮದ ತರವಾಡು ಮನೆತನದ ಪ್ರಮುಖರು ಮತ್ತು ಕುಟುಂಬಸ್ಥರು,ಮಹೋತ್ಸವದ ಉಪ ಸಮಿತಿಯ ಸಂಚಾಲಕರು,ಸಹ ಸಂಚಾಲಕರು ಹಾಗೂ ಸದಸ್ಯರು, ದೈವ ನರ್ತಕರು ಹಾಗೂ ಸ್ಥಳೀಯರು, ಗ್ರಾಮಸ್ಥರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

NO COMMENTS

error: Content is protected !!
Breaking