ಅವರಷ್ಟು ಸಮರ್ಥರು, ಅನುಭವಿ ಹಾಗೂ ಅರ್ಹರು ಬೇರೊಬ್ಬರಿಲ್ಲ
ಹರೀಶ್ ಇಲ್ಲದೆ ಸುಬ್ರಹ್ಮಣ್ಯದಲ್ಲಿ ಕಾಂಗ್ರೆಸ್ ಇರಲಾರದು
ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ
ಕಾಂಗ್ರೆಸ್ ನ ಹರೀಶ್ ಇಂಜಾಡಿಯವರು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ ನೇಮಕ ಮಾಡಲು ಶಿಫಾರಸುಗೊಂಡಿರುವುದು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಅವರ ರಾಜಕೀಯ ವಿರೋಧಿಗಳು ಅವರಿಗೆ ಅವಕಾಶ ತಪ್ಪಿಸಲು ವಿವಿಧ ಕುತಂತ್ರಗಳನ್ನು ಮಾಡುತ್ತಿದ್ದಾರೆ. ದೃಶ್ಯಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಅವರೊಟ್ಟಿಗೆ ರೌಡಿಶೀಟರ್, ಕ್ರಿಮಿನಲ್ ಪ್ರಕರಣಗಳಿವೆ, ದೇವಸ್ಥಾನಕ್ಕೆ ಹಣ ಪಾವತಿಸಲು ಬಾಕಿ ಇರಿಸಿಕೊಂಡಿದ್ದಾರೆ ಎಂಬ ಅಪಪ್ರಚಾರ ನಡೆಸಿ ತೇಜೋವಧೆ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರಾದ ನಾವು ಸತ್ಯಾಂಶಗಳನ್ನು ಸ್ಪಷ್ಟಿಕರಿಸಲು ಬಯಸುವುದಾಗಿ
ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಮಾ.25 ರಂದು ತಿಳಿಸಿದೆ.
ಕಳೆದ 23 ವರ್ಷಗಳ ಹಿಂದೆ ಅಂದರೆ 2002ನೇ ವರ್ಷದಲ್ಲಿ ಹರೀಶ್ ಇಂಜಾಡಿಯವರು ದೇವಸ್ಥಾನದ ಅಂಗಡಿಗಳನ್ನು ಹರಾಜಿನಲ್ಲಿ ಪಡಕೊಂಡು ಕಾರಣಾಂತರಗಳಿಂದ ನಷ್ಟ ಅನುಭವಿಸಿದ ಸಂರ್ಭದಲ್ಲಿ ದೇವಸ್ಥಾನಕ್ಕೆ ಪಾವತಿಸಲು ಸುಮಾರು 9 ಲಕ್ಷಗಳಷ್ಟು ಬಾಕಿಯಾಗಿತ್ತು. ಆ ಸಂದರ್ಭದಲ್ಲಿ ಹರೀಶ್ ಇಂಜಾಡಿಯವರು ತನ್ನದಾಗಿರುವ ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಪಶ್ಚಾತ್ತಾಪಪಟ್ಟು ದೇವಾಲಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡದೇ ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣ ಮೊತ್ತವನ್ನು ಪಾವತಿಸಿರುತ್ತಾರೆ ಹಾಗೂ ತದನಂತರ ಯಾವುದೇ ಹಣ ಪಾವತಿಗೆ ಬಾಕಿಗಳಿಲ್ಲದೆ ಆರೋಪಮುಕ್ತರಾಗಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಡತಗಳನ್ನು ಪರಿಶೀಲಿಸಬಹುದಾಗಿದೆ. ಹಾಗಿದ್ದರೂ ಅವರ ತಜೋವದೆ ಮಾಡುತಿದ್ದಾರೆ.
ರಾಜಕೀಯವಾಗಿ ಕಾಂಗ್ರೇಸ್ ಪಕ್ಷದ ಪರವಾಗಿ ಕಳೆದ 30 ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಿರುವ ಹರೀಶ್ ಇಂಜಾಡಿಯವರು ರಾಜಕೀಯ ವಿರೋಧಿಗಳ ಷಡ್ಯಂತ್ರಕ್ಕೆ ಸಿಲುಕಿ ನಾಗಭೂಷಣ್ ಎಂಬ ಸರ್ಕಲ್ ಇನ್ಸ್‌ಪೆಕ್ಟರ್‌ರವರು ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಹರೀಶ್ ಇಂಜಾಡಿಯವರ ಮೇಲೆ ರೌಡಿಶೀಟರ್ ಪ್ರಕರಣವನ್ನು 2005ರಲ್ಲಿ ದಾಖಲಿಸಿರುತ್ತಾರೆ.
ಆದರೆ ಮುಂದಿನ ವರ್ಷಗಳಲ್ಲಿ ಹರೀಶ್ ಇಂಜಾಡಿಯವರ ಮೇಲೆ ಯಾವುದೇ ಪ್ರಕರಣಗಳಿಲ್ಲದಿರುವುದು ಹಾಗೂ ಸನ್ನಡತೆಯನ್ನು ಗಮನಿಸಿದ ಪೊಲೀಸ್ ಇಲಾಖೆ ಕಳೆದ 12 ವರ್ಷಗಳ ಹಿಂದೆಯೇ ರೌಡಿಶೀಟ್‌ನ್ನು ರದ್ದುಪಡಿಸಿರುತ್ತದೆ.
ತದನಂತರ ನಿರಂತರ ಮೂರು ಬಾರಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಜಯಗಳಿಸಿದ ಏಕೈಕ ನಾಯಕರಾಗಿದ್ದಾರೆ. ನಿರಂತರವಾಗಿ ಸಮಾಜಸೇವೆ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ಸ್ವಾರ್ಥರಹಿತವಾಗಿ ತೊಡಗಿಸಿಕೊಂಡಿರುವ ಹರೀಶ್ ಇಂಜಾಡಿಯವರು ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಹಗಲಿರುಳು ಸ್ಪಂದಿಸುತ್ತಾ ಜನಾನುರಾಗಿಯಾಗಿದ್ದಾರೆ. ಹಾಗೂ ತನ್ನ ವ್ಯವಹಾರ ಹಾಗೂ ಸಾಮಾಜಿಕ ಜೀವನದಲ್ಲಿ ಗೌರವಯುತವಾಗಿ ಗುರುತಿಸಿಕೊಂಡಿರುತ್ತಾರೆ.
ಇದೀಗ ಅವರ ರಾಜಕೀಯ ವಿರೋಧಿಗಳು ಹಾಗೂ ದೇವಸ್ಥಾನದ ಸುಮಾರು 4 ಕೋಟಿಗೂ ಮೀರಿ ಬಾಡಿಗೆ ಬಾಕಿ ಇರಿಸಿಕೊಂಡಿರುವ ವಂಚಕರು ಹರೀಶ್ ಇಂಜಾಡಿಯವರು ಸದಸ್ಯರಾಗಿ ನೇಮಕಗೊಂಡಲ್ಲಿ ತಮ್ಮ ಮೇಲೆ ಉಂಟಾಗುವ ಪರಿಣಾಮಗಳಿಂದ ಆತಂಕಿತರಾಗಿದ್ದಾರೆ ಹಾಗೂ ತಪ್ಪಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ. ದೇವಸ್ಥಾನದ ಅಂಗಡಿಗಳನ್ನು ಕಾಯ್ದೆ ಉಲ್ಲಂಘಿಸಿ, ಅವಧಿ ಮೀರಿದರೂ ಬಿಟ್ಟುಕೊಡದೆ ಒಳಬಾಡಿಗೆಗೆ ಕೊಟ್ಟು ದಂಧೆ ನಡೆಸಿ ದೇವಸ್ಥಾನಕ್ಕೆ ನಷ್ಟ ಉಂಟು ಮಾಡಿದವರು ಇದರಲ್ಲಿ ಕೈಜೋಡಿಸಿದ್ದಾರೆ.
ಕೊನೆಯದಾಗಿ ನಾವೆಲ್ಲ ನಮ್ಮ ಜಿಲ್ಲಾ ಹಾಗೂ ರಾಜ್ಯ ನಾಯಕರೊಂದಿಗೆ ಮಾಧ್ಯಮಗಳ ಮೂಲಕ ವಿನಂತಿಸುವುದೇನೆಂದರೆ ಯಾವುದೇ ಕಾರಣಕ್ಕೂ ಹರೀಶ್ ಇಂಜಾಡಿಯವರ ಮೇಲಿನ ವಿರೋಧಿಗಳ ಅಪಪ್ರಚಾರಕ್ಕೆ
ಕಿವಿಕೊಡಬೇಡಿ. ಸುಬ್ರಹ್ಮಣ್ಯ ದೇವಾಲಯಕ್ಕೆ ಸ್ಥಳೀಯ ಪ್ರತಿನಿಧಿಯಾಗಿ ನೇಮಕಗೊಳ್ಳಲು ಹರೀಶರಷ್ಟು ಸಮರ್ಥರು, ಅನುಭವಿ ಹಾಗೂ ಅರ್ಹರು ಬೇರೊಬ್ಬರಿಲ್ಲ. ಅವರು ಪಕ್ಷದಲ್ಲಿ ಅವಕಾಶ ಸಿಗದೆ ನಿಷ್ಕ್ರಿಯರಾದಲ್ಲಿ ಕಾರ್ಯಕರ್ತರಾದ ನಾವೆಲ್ಲ ಎದೆಗುಂದಿ ಪಕ್ಷದ ಚುನಾವಣಾ ಚಟುವಟಿಕೆಗಳಲ್ಲಿ ಅವರ ನಾಯಕತ್ವವಿಲ್ಲದೆ ಮುಂದುವರಿಯಲು ಕಷ್ಟಸಾಧ್ಯ ಆದುದರಿಂದ ಹರೀಶ್ ಇಂಜಾಡಿಯವರನ್ನು ಸ್ಥಳೀಯ ಪ್ರತಿನಿಧಿಯಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸದಸ್ಯರಾಗಿ ನೇಮಿಸುವಂತೆ ಆಗ್ರಹಿಸುತ್ತೇವೆ ಎಂದು ಜಗದೀಶ್ ಪಡ್ಪು ತಿಳಿಸಿದರು.

ಹರೀಶ್ ಇಂಜಾಡಿ ಕಾಂಗ್ರೆಸ್ ನ್ನು ಸುಬ್ರಹ್ಮಣ್ಯದಲ್ಲಿ ಕಟ್ಡಿ ಬೆಳೆಸುತಿದ್ದಾರೆ. ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡಬೇಕು. ಇಲ್ಲದಿದ್ದರೆ ಸುಬ್ರಹ್ಮಣ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದು ಕೊಳ್ಳುತ್ತದೆ ಎಂದು ರವೀಂದ್ರ ರುದ್ರಪಾದ ತಿಳಿಸಿದರು.
ರಾಜಕೀಯ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಸುಳ್ಳು ಪ್ರಚಾರ ಮಾಡುತಿದ್ದಾರೆ. ಇದು ರಾಜಕೀಯ ಕಾರಣಕ್ಕೊಸ್ಕರ ಎಂದು ಲೋಲಾಕ್ಷ ಕೈಕಂಬ ತಿಳಿಸಿದರು.
ವ್ಯಕ್ತಿಯ ತೆಜೋವದೆ ಮಾಡುವುದು ಸರಿಯಲ್ಲ. ಹರೀಶ್ ಇಂಜಾಡಿ ಅವರನ್ನು ವ್ಯವಸ್ಥಾಪನಾ ಸಮಿತಿ ನೀಡಲೇ ಬೇಕು. ಸುಬ್ರಹ್ಮಣ್ಯಕ್ಕೆ ನಾಲ್ಕು ಸ್ಥಾನ ಕೊಡಲೇ ಬೇಕೆಂದು ಭೇಡಿಕೆ ಇಟ್ಟಿದ್ದೇವೆ. ಅದನ್ನು ಪರಿಗಣಿಸ ಬೇಕು. ಪುತ್ತೂರು, ಕಟೀಲ್ ಮತ್ತಿತರ ಕಡೆ ಅಲ್ಲಿಯವರಿಗೆ ಕೊಡುತ್ತಾರೆ ಇಲ್ಲೂ ಹಾಗೇ ಮಾಡಬೇಕು ಎಂದು ಪದ್ಮಯ್ಯ ಜಾಡಿಮನೆ ಹೇಳಿದರು.
ರತ್ನಕುಮಾರಿ, ಸೌಮ್ಯ ಭರತ್, ಸುರೇಶ್ ಭಟ್, ಭರತ್ ಸೌಮ್ಯ, ಲೋಲಾಕ್ಷ ಕೈಕಂಬ, ಡಿ.ಶೇಷಕುಮಾರ್, ಡಿ.ಗಣೇಶ್, ಸೋಮಶೇಖರ ಕಟ್ಟೆಮನೆ, ಭವಿಷ್, ಕುಸುಮಾ, ಚಂದ್ರಶೇಖರ, ಚರಣ್, ಆಕಾಶ್ ಮತ್ತಿತರರು ಆಗ್ರಹಿಸಿದ್ದಾರೆ.