ನಾಳೆ ರಾತ್ರಿ ಶ್ರೀ ದೇವರ ಭೂತಬಲಿ, ನೃತ್ಯ ಬಲಿ
ಮಾ.27ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಉಗ್ರಾಣ ತುಂಬಿಸುವುದರೊಂದಿಗೆ ಕಾಲಾವಧಿ ಜಾತ್ರೋತ್ಸವಕ್ಕೆ ಮಾ. 25 ರಂದು ಬೆಳಗ್ಗೆ ಚಾಲನೆ ದೊರೆತಿದೆ.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಜಿತೇಂದ್ರ ನಿಡ್ಯಮಲೆ, ತಕ್ಕ ಮುಖ್ಯಸ್ಥರು,ಆಡಳಿತ ಸಮಿತಿಯ ಸದಸ್ಯರು, ಭಕ್ತಭಿಮಾನಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಾಳೆ ಬೆಳಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಸಾಯಂಕಾಲ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು, ಸಾಯಂಕಾಲ ಗಂಟೆ ೫-೦೦ಕ್ಕೆ ಮುಖ ತೋರಣ ಏರಿಸುವುದು. ಸಾಯಂಕಾಲ ಗಂಟೆ ೫-೩೦ರಿಂದ ಶಿಸ್ತು ಅಳೆಯುವುದು, ರಾತ್ರಿ ಗಂಟೆ ೭-೪೫ರಿಂದ ದೇವರ ಶ್ರೀ ಭೂತಬಲಿ, ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ ನಡೆಯಲಿದೆ.
ಮಾ.27ರಂದು ಬೆಳಗ್ಗೆ ಗಂಟೆ ೯-೦೦ರಿಂದ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ,ಪ್ರಸಾದ ವಿತರಣೆ,ರಾತ್ರಿ ಗಂಟೆ ೮-೦೦ರಿಂದ ತುಳು ಕೋಲದ ಬೆಳ್ಳಾಟ ೨, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ೨. ಮಾ.೨೮ರಿಂದ ಮಧ್ಯಾಹ್ನ ಗಂಟೆ ೧೨-೦೦ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೮-೦೦ರಿಂದ ತುಳು ಕೋಲ ೨ರ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ.
ಮಾ.29 ರಂದು ಮಧ್ಯಾಹ್ನ ಗಂಟೆ ೧೨-೦೦ರಿಂದ ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೬-೩೦ರಿಂದ ಪಳ್ಳಿಯಾರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು ೨ ಮತ್ತು ಅವುಗಳ ತಿರುವಪ್ಪಗಳು ೨ ನಡೆಯಲಿದೆ.
ಮಾ.30ರಂದು ಬೆಳಿಗ್ಗೆ ಗಂಟೆ ೧೦-೦೦ರಿಂದ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೮-೦೦ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ ೨, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ,ತುಳು ಕೋಲಗಳ ತಿರುವಪ್ಪಗಳು ೨ ನಡೆಯಲಿದೆ.
ಮಾ.31 ರಂದು ಬೆಳಿಗ್ಗೆ ಗಂಟೆ ೮-೦೦ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಮಧ್ಯಾಹ್ನ ಗಂಟೆ ೧೨-೦೦ರಿಂದ ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಗಂಟೆ ೭-೩೦ರಿಂದ ಭಗವತಿ ದೇವಿ ಸಮಾರಾಧನೆ, ರಾತ್ರಿ ಗಂಟೆ ೮-೦೦ರಿಂದ ಪುಲ್ಲೂರ್ ಕಣ್ಣನ್ ಬೆಳ್ಳಾಟ ೧, ತುಳು ಕೋಲಗಳು ಬೆಳ್ಳಾಟ ೧, ಮಲೆಕಾರಿ ಬೆಳ್ಳಾಟ ೧, ವಿಷ್ಣುಮೂರ್ತಿ ತೊಡಂಙಲು, ರಕ್ತೇಶ್ವರಿ ತೊಡಂಙಲು,ಪೊಟ್ಟನ್ ದೈವದ ತೊಡಂಙಲು, ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ, ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಲಿದೆ. ಎ.೧ ರಂದು ಅಪರಾಹ್ನ ೪ಕ್ಕೆ ಶ್ರೀ ಭಗವತಿ ದೊಡ್ಡಮುಡಿ ನಡೆಯಲಿದೆ.
ಮಾ.೨೬ರಿಂದ ೩೧ರವರೆಗೆ ಸಂಜೆ ೬.೩೦ರಿಂದ ೭.೩೦ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಎ.೧೦ರವರೆಗೆ ಕಾಲಾವಧಿ ಜಾತ್ರೋತ್ಸವ ನಡೆಯಲಿದೆ.