ವಿವಿಧ ಧಾರ್ಮಿಕ ಮುಖಂಡರುಗಳು ಭಾಗಿ
ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನ (ರಿ ) ಇದರ ವತಿಯಿಂದ ತೆಕ್ಕಿಲ್ ಸಮುದಾಯ ಭವನದಲ್ಲಿ ಮಾ 26 ರಂದು ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮುಖಂಡರುಗಳು, ಹಾಗೂ ಸಂಘ ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸೌಹಾರ್ದತೆಯ ಪ್ರತೀಕವಾಗಿ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧ ಪುರುಷ ಮಠ ಮರ್ಕಂಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜೀ,ಸುಳ್ಯ ಚರ್ಚ್ ಫಾದರ್ ವಿಕ್ಟರ್ ಡಿ ಸೋಜಾ, ಅರಂತೋಡು ಮಸೀದಿ ಗುರುಗಳಾದ ಇಸ್ಮಾಹಿಲ್ ಫೈಝಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಧರ್ಮದರ್ಶಿ ರಾಜೇಶ್ ನಾಥ್ ಜೀ ‘ಇಂತಹ ಸಮಾರಂಭಗಳು ಹಾಗೂ ವೇದಿಕೆಗಳು ಸಮಾಜಕ್ಕೆ ಭಾವೈಕ್ಯತೆಯ ಉತ್ತಮ ಸಂದೇಶವನ್ನು ನೀಡುವಂತಹದಾಗಿದೆ. ಪರಸ್ಪರ ಪ್ರೀತಿ,ವಿಶ್ವಾಸಗಳು ದೇವ ದರ್ಶನದ ಮುಖ್ಯ ಭಾಗ ವಾಗಿರುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭಾರೈಸಿದರು.
ಸುಳ್ಯ ಸೈoಟ್ ವಿಕ್ಟರ್ಸ್ ಚರ್ಚ್ ಇದರ ಧರ್ಮ ಗುರು ಫಾ.ವಿಕ್ಟರ್ ಡಿ ‘ಸೋಜಾರವರು ಕೂಡ ಮಾತನಾಡಿ ಸೌಹಾರ್ದತೆಯ ಸಂದೇಶವನ್ನು ನೀಡಿದರು.
ಅರಂತೋಡು ಜುಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿ ಸಿದರು.



ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫಾ ರವರನ್ನು ತೆಕ್ಕಿಲ್ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಹೀದ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಯೋಜನೆ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್,ಸುಳ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಆರ್ ಎ ಎಫ್ ಓ ಮಂಜುನಾಥ್,ಮುಖಂ ಡರುಗಳಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು,ಬದ್ರುದ್ದೀನ್ ಪಟೇಲ್,ಸುಳ್ಯ ಅಲ್ಪ ಸಂಖ್ಯಾತ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿ ಮಲೆ,ಕಾಂಗ್ರೆಸ್ ಮುಖಂಡರುಗಳಾದ ರಾಧಾಕೃಷ್ಣ ಬೊಳ್ಳೂರು,ಸುರೇಶ್ ಅಮೈ,ಸಿದ್ದೀಕ್ ಕೊಕ್ಕೋ, ಚೇತನ್ ಕಜೆಗದ್ದೆ, ಗೋಕುಲ್ ದಾಸ್,ಭವಾನಿ ಶಂಕರ್ ಕಲ್ಮಡ್ಕ ಹಿರಿಯರಾದ ದಾಮೋದರ ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.