Home Uncategorized ದುಗ್ಗಲಡ್ಕದಲ್ಲಿ ಹೋಟೆಲ್ ಕಿರಣ್ ಶುಭಾರಂಭ

ದುಗ್ಗಲಡ್ಕದಲ್ಲಿ ಹೋಟೆಲ್ ಕಿರಣ್ ಶುಭಾರಂಭ

0

ದುಗ್ಗಲಡ್ಕ ಪೇಟೆಯ ಮುಖ್ಯರಸ್ತೆ ಬದಿಯಲ್ಲಿ ಬಾಬು ಮಣಿಯಾಣಿ ಕೊಡೆಂಚಡ್ಕ ಮಾಲಕತ್ವದ ಹೋಟೆಲ್ ಕಿರಣ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟ ಉಪಹಾರ ಮಂದಿರ ಇಂದು ಬೆಳಿಗ್ಗೆ ಶುಭಾರಂಭಗೊಂಡಿತು.
ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಾಬು ಮಣಿಯಾಣಿ, ಶ್ರೀಮತಿ ಲೀಲಾ ಬಾಬು ಮಣಿಯಾಣಿ ಮತ್ತು ಮನೆಯವರು ಹಾಗೂ ಬಂಧು ಮಿತ್ರರು, ಸ್ಥಳೀಯರು ಉಪಸ್ಥಿತರಿದ್ದರು.
ಇಲ್ಲಿ ಶುಚಿ ರುಚಿಯಾದ, ತಾಜಾ ಸಸ್ಯಹಾರಿ ಮತ್ತು ಮಾಂಸಹಾರಿ ಊಟ ಉಪಹಾರ ದೊರೆಯುತ್ತದೆ ಮತ್ತು ಕ್ಯಾಟರಿಂಗ್ ವ್ಯವಸ್ಥೆ ಇದೆ ಎಂದು ಮಾಲಕರು ತಿಳಿಸಿದ್ದಾರೆ.

NO COMMENTS

error: Content is protected !!
Breaking