
ಎಲಿಮಲೆಯ ಅನಿವಾಸಿ ಭಾರತೀಯರ ಸಮಿತಿಯಾದ ಜಿ.ಸಿ.ಸಿ. ಗಲ್ಫ್ ಸಮಿತಿ ವತಿಯಿಂದ ಬೃಹತ್ ಇಫ್ತಾರ್ ಸಂಗಮ ಹಾಗೂ ಪ್ರಾರ್ಥನಾ ಕೂಟವು ಎಲಿಮಲೆ ಮಸೀದಿ ವಠಾರದಲ್ಲಿ ಜರಗಿತು..
ಕಬರ್ ಝಿಯಾರತ್ ಹಾಗೂ ಪ್ರಾರ್ಥನಾ ಕೂಟದ ನೇತೃತ್ವವನ್ನು ಎಲಿಮಲೆ ಸಹಮುದರ್ರಿಸರಾದ ಹಾರಿಸ್ ಸುರೈಜಿ ಸಖಾಫಿಯವರು ವಹಿಸಿದ್ದರು.
ತಮ್ಮ ಕುಟುಂಬಸ್ಥರನ್ನೂ ಊರವರನ್ನೂ ಬಿಟ್ಟು ಮರುಭೂಮಿಯಲ್ಲಿ ಕಷ್ಟಪಡುವುದರ ಮಧ್ಯೆ ಊರಿನ ಒಳಿತಿಗಾಗಿ ಒಂದಿಷ್ಟು ಸೇವೆ ನೀಡುವ ಮೂಲಕ ಊರಿನ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಿರುವ ಜಿ.ಸಿ.ಸಿ. ಸಮಿತಿಯ ಕಾರ್ಯವೈಖರಿಯ ಬಗ್ಗೆ ಜಮಾಅತ್ ಕಮಿಟಿಯ ಉಪಾಧ್ಯಕ್ಷ ಮಹಮೂದ್ ಸಖಾಫಿಯವರು ಪ್ರಶಂಸಿದರು.
ಎಲಿಮಲೆ, ಮೆತ್ತಡ್ಕ, ಹಾಗೂ ಜೀರ್ಮುಕ್ಕಿಯ ನೂರಾರು ಮಂದಿ ಉಪವಾಸಿಗರು ಇಫ್ತಾರ್ ಸಂಗಮದಲ್ಲಿ ಭಾಗವಹಿಸಿದ್ದರು..
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ,
ಕಾರ್ಯದರ್ಶಿ ಇಬ್ರಾಹಿಂ. ಜಿ.ಎಂ..
ಕೋಶಾಧಿಕಾರಿ ಅಬ್ದುಲ್ಲ ಜಿ. ಎಸ್.
ಜೀರ್ಮುಕಿ ಮಸೀದಿ ಅಧ್ಯಕ್ಷರಾದ ಹಸನ್ ಹರ್ಲಡ್ಕ.
ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷ ಮೂಸಹಾಜಿ, ಹಿರಿಯರಾದ ಹರ್ಲಡ್ಕ ಮಹಮ್ಮದ್ ಹಾಜಿ, ಅಬೂಬಕರ್ ಪಾಣಾಜೆ, ಇಬ್ರಾಹಿಂ ಜಿ. ಹೆಚ್, ಅಬ್ದುಲ್ಲ ಮೆತ್ತಡ್ಕ, ನುಸ್ರತ್ ಉಪಾಧ್ಯಕ್ಷ ಅಬ್ದುಲ್ ಕಾದರ್, ಕಾರ್ಯದರ್ಶಿ ಸೂಫಿ ಎಲಿಮಲೆ, ಕೋಶಾಧಿಕಾರಿ ಬಾತಿಶಾ ಯೂಸುಫ್.. ಸದರ್ ಉಸ್ತಾದ್ ಫೈಝಲ್ ಸಖಾಫಿ ಉಪಸ್ಥಿತರಿದ್ದರು.
ಹಾರಿಸ್ ಪಳ್ಳಿಕಲ್ ಮತ್ತು ರಫೀಕ್ ಜೀರ್ಮುಕಿ ಕಾರ್ಯಕ್ರಮ ನಿರ್ವಹಿಸಿದರು.
ಕೊನೆಯಲ್ಲಿ ನಡೆದ ಅನ್ನದಾನವನ್ನು ನೂರಾರು ಮಂದಿ ಸ್ವೀಕರಿಸಿ ಸಂತೃಪ್ತರಾದರು..
ನಾಸಿರ್, ಸತ್ತಾರ್, ಸಿಯಾಬ್ ಸಹಕರಿಸಿದರು


