ಪಂಜ-ಗುತ್ತಿಗಾರು ರಸ್ತೆಯ ಕಾಮಗಾರಿ ಗುದ್ದಲಿ ಪೂಜೆ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ

ಪಂಜ-ಗುತ್ತಿಗಾರು ರಸ್ತೆಯ ಕಾಮಗಾರಿ ಗುದ್ದಲಿ ಪೂಜೆ ಹಾಗೂ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಮಾ.29 ರಂದು ಪಂಜ ದೇವಳದ ದ್ವಾರದ ಬಳಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ.ರಾಮಯ್ಯ ಭಟ್ ಪಂಜ ದೀಪ ಬೆಳಗಿಸಿದರು.
ಶಾಸಕಿ ಕು.ಭಾಗೀರಥಿ ಮುರುಳ್ಯ ತೆಂಗಿನ ಕಾಯಿ ಒಡೆದು ಕಾಮಗಾರಿ ಉದ್ಘಾಟಿಸಿದರು.ಬಳಿಕ ಅವರು ಮಾತನಾಡಿ ” ಪಿಡಬ್ಲ್ಯೂ ಡಿ ಯೋಜನೆಯಡಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 8.ಕೋಟಿ ರೂ ಅನುದಾನ ದೊರೆತಿದೆ. ಇದರಲ್ಲಿ 1 ಕೋಟಿಯ ಕಾಮಗಾರಿ ಇಲ್ಲಿಯೇ ನಡೆಯಲಿದೆ. ಈ ರಸ್ತೆಯ ಕಾಮಗಾರಿ ಈಗಿರುವ ಡಾಮಾರು ರಸ್ತೆ ಇನ್ನೂ ಅಗಲಿಕರಣ ಗೊಂಡು ರೂ. 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಜಳಕದಹೊಳೆ ಸೇತುವೆ 50 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ಒದಗಿಸಿದ್ದು ಕಾಮಗಾರಿಗಳು ಪೂರ್ಣ ಗೊಂಡಿದೆ.”. ಕಾಮಗಾರಿ ನಡೆಯಲು ಎಲ್ಲರ ಸಹಕಾರ ಅಗತ್ಯ . ಎಂದು ಹೇಳಿದರು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ
” ಈ ಹಿಂದೆಯೇ ಈ ರಸ್ತೆ ಅಭಿವೃದ್ಧಿಗೆ ನಾವು ಬೇಡಿಕೆ ಸಲ್ಲಿಸಿದ್ದೇವು. ಶಾಸಕರು ಅದಕ್ಕೆ ಸ್ಪಂದಿಸಿದ್ದಾರೆ. ಅಲ್ಲದೇ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿಗೆ ಅನುದಾನ ನೀಡಿದ್ದಾರೆ. ಕೆಲವು ರಸ್ತೆಗಳ ಕಾಂಕ್ರೀಟ್ ಕಾಮಗಾರಿ ಪಂಚಾಯತ್ ಅನುದಾನದಲ್ಲಿ ಕಾಮಗಾರಿ ನಡೆದಿದೆ ಕೆಮ್ಮೂರು-ಪುಂಡುಕಾಯರ ರಸ್ತೆ 5 ಲಕ್ಷ ರೂ., ಕೃಷ್ಣನಗರ-ರೆಂಜೆಮಜಲು 4 ಲಕ್ಷ ರೂ, ಪುತ್ಯ-ಸಂಪ ರಸ್ತೆ 3.50 ಲಕ್ಷ ರೂ,ಬೇರ್ಯ ರಸ್ತೆ 1.80 ಲಕ್ಷ ರೂ, ನೆಕ್ಕಿಲ-ಮಿತ್ರಣೆ ರಸ್ತೆ,1.80 ಲಕ್ಷ ರೂ, ನಾಡಕಛೇರಿ, ನೆಕ್ಕಿಲ ರಸ್ತೆ 1.80ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಪಂಜ-ಗುತ್ತಿಗಾರು ರಸ್ತೆ 50 ಲಕ್ಷ ರೂ ಮತ್ತು ಜಳಕದಹೊಳೆ ಸೇತುವೆ ದುರಸ್ತಿ 50 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ”. ಎಂದು ವಿವರಿಸಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಅಧ್ಯಕ್ಷತೆ ವಹಿಸಿದ್ದರು.



ಭಾಜಪ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್, ಶಿವರಾಮಯ್ಯ ಕರ್ಮಾಜೆ,
ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಚಂದ್ರಶೇಖರ ದೇರಾಜೆ, ಶರತ್ ಕುದ್ವ,ಲಿಖಿತ್ ಪಲ್ಲೋಡಿ, ಶ್ರೀಮತಿ ವೀಣಾ, ಶ್ರೀಮತಿ ನೇತ್ರಾವತಿ ಕಲ್ಲಾಜೆ, ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು , ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಲಿಗೋಧರ ಆಚಾರ್ಯ ಎನ್, ವಾಚಣ್ಣ ಕೆರೆಮೂಲೆ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ, ಪಿಡಬ್ಲ್ಯೂಡಿ ಇಂಜಿನಿಯರ್ ಪರಮೇಶ್ವರ್ , ಲೋಕೇಶ್ ಬರೆಮೇಲು,ಮೊನಪ್ಪ ಕೆಬ್ಲಾಡಿ, ಧರ್ಮಪಾಲ ಗೌಡ ಕಕ್ಯಾನ, ದಯಾನಂದ ಮೇಲ್ಮನೆ,ರಮೇಶ್ ಕುದ್ವ, ಕಿರಣ್ ನೆಕ್ಕಿಲ,ಶೇಷಪ್ಪ ಗೌಡ ಕೆರೆಮೂಲೆ, ಸುಬ್ರಾಯ ಭಟ್ ಅಲಕಾ, ರಾಜೇಶ್ ಪಲ್ಲೋಡಿ, ನಾಗೇಶ್ ಕುಳ್ಳಾಜೆ, ಪರಮೇಶ್ವರ ಬಿಳಿಮಲೆ , ಗಂಗಾಧರ ಶಾಸ್ತ್ರಿ ಪುತ್ಯ, ವಿಜಯ ಕುಮಾರ್ ಬೇರ್ಯ,ಊರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಯರಾಮ ಕಲ್ಲಾಜೆ ಸ್ವಾಗತಿಸಿದರು ಮತ್ತು ವಂದಿಸಿದರು