ಸುಳ್ಯದ ಅರಂಬೂರು ಸರಳಿ ಕುಂಜ ನಿವಾಸಿ
ಶ್ರೀಮತಿ ಸವಿತಾ – ಜಗದೀಶ್ ಸರಳಿ ಕುಂಜರವರ ಪುತ್ರಿ ಕು.ಅನನ್ಯ ರವರು ಮೀನು ಸಂಸ್ಕರಣ ತಂತ್ರಜ್ಞಾನ ವಿಷಯದಲ್ಲಿ ಮೀನುಗಾರಿಕಾ ವಿಜ್ಞಾನ ಎಂ.ಎಫ್.ಎಸ್.ಸಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದು ಕರ್ನಾಟಕ ಪಶು ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ನೀಡುವ ಚಿನ್ನದ ಪದಕ ಹಾಗೂ ಎಚ್ ಪಿ ಸಿ ಶೆಟ್ಟಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಸುಳ್ಯ ಪರಿವಾರಕಾನದ ನಾಟಿ ವೈದ್ಯ ಪದ್ಮಯ ಗೌಡ – ಯಶೋದ ದಂಪತಿಯ ಮೊಮ್ಮಗಳಾಗಿರುವ ಅನನ್ಯರವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ನೇಹ ಶಾಲೆಯಲ್ಲೂ, ಪದವಿಪೂರ್ವ ಶಿಕ್ಷಣವನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲೂ, ಪದವಿ ಮತ್ತು ಸ್ತಾತಕೋತ್ತರ ಪದವಿಯನ್ನು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲೂ ಪೂರೈಸಿದರು. ಪ್ರಸ್ತುತ ಇವರು
ಸಾಗರ ಉತ್ಪನ್ನಗಳ ರಫ್ತು ಪ್ರಾಧಿಕಾರ – ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಭಾರತ ಸರ್ಕಾರ ಇಲ್ಲಿ ಯಂಗ್ ಪ್ರೊಫೆಷನಲ್ ಫಿಷರೀಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


