
ಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬೆಳ್ಳಾರೆ ಇದರ ವಾರ್ಷಿಕ ಮಹಾ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ಕ್ರೀಡಾ ಕೂಟದ ಬಹುಮಾನ ವಿತರಣೆ ಕಾರ್ಯಕ್ರಮವು ಮಾ.27 ರಂದು ರಾಜೀವ್ ಗಾಂಧಿ ಸೇವಾ ಕೇಂದ್ರ ದಲ್ಲಿ ನಡೆಯಿತು.

ಒಕ್ಕೂಟ ದ ಅಧ್ಯಕ್ಷೆ ನಳಿನಾಕ್ಷಿ ಯವರ ಅಧ್ಯಕ್ಷೆತೆಯಲ್ಲಿ,ಸಂಜೀವಿನಿ ಸದಸ್ಯೆ ಲೋಲಾಕ್ಷಿ ನೆಟ್ಟಾರು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕೃಷಿ ಸಖಿ ಶ್ರೀಮತಿ ತಾರ ರವರು ಸ್ವಾಗತಿಸಿದರು.
ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ನಮಿತಾ ಲ್. ರೈ ಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲ್ಲೂಕು ವಲಯ ಮೇಲ್ವಿಚಾರಕರಾದ ಮಹೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಜೀವಿನಿಯ ಸಮಗ್ರ ಮಾಹಿತಿ ನೀಡಿದರು. ಒಕ್ಕೂಟ ದ ಎಂಬಿಕೆ ಶ್ರೀಮತಿ ಗೀತಾಪ್ರೇಮ್ 2019 ರಿಂದ ಒಕ್ಕೂಟ ನಡೆದು ಬಂದ ರೀತಿ,ಸಮಗ್ರ ಮಾಹಿತಿ ಯ ವರದಿ ಮತ್ತು 2023–24 ರ ಲೆಕ್ಕಪತ್ರ ವರದಿ ವಾಚಿಸಿದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ರವರು ಒಕ್ಕೂಟ ನಡೆದು ಬಂದ ರೀತಿ, ಪ್ರಗತಿ,ವರದಿ ಬಗ್ಗೆ ಮತ್ತು ಸಾಧನೆ ಬಗ್ಗೆ ಪ್ರಸಂಸೆ ವ್ಯಕ್ತ ಪಡಿಸಿದರು.




ಕಾರ್ಯಕ್ರಮ ದಲ್ಲಿ ಸ್ವಚ್ಛ ವಾಹಿನಿ ಯ ಇಬ್ಬರು ಚಾಲಕಿಯರಿಗೆ, ಘನ ತ್ಯಾಜ್ಯ ಸಿಬ್ಬಂದಿ ಯವರಿಗೆ, ಒಕ್ಕೂಟ ದಿಂದ ಸಿಐಎಫ್ ಸಾಲ ಪಡೆದು ಕೃಷಿ, ಹೈನುಗಾರಿಕೆ ಮಾಡುತಿರುವ ನಿಸರ್ಗ ಸಂಜೀವಿನಿ ಸದಸ್ಯೆ ಶ್ರೀಮತಿ ಚಂಚಲಾಕ್ಷಿ ಯವರಿಗೆ, ಸ್ವ ಉದ್ಯೋಗ ಮಾಡುತಿರುವ ಸ್ತ್ರಿ ಶಕ್ತಿ ಸದಸ್ಯೆ ಲಲಿತಾ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಎಲ್.ಸಿ.ಆರ್.ಪಿ ಶ್ರೀಮತಿ ದಿವ್ಯಲತ ಕ್ರೀಡಾಕೂಟ ದ ಬಹುಮಾನ ಪಡೆದವರ ಪಟ್ಟಿ ಯನ್ನು ವಾಚಿಸಿದರು. ಎಲ್.ಸಿ.ಆರ್.ಪಿ ಶಕೀಲಾ ವೈ ಶೆಟ್ಟಿ ಸಹಕರಿಸಿದರು.
ವೇದಿಕೆಯಲ್ಲಿ ಗ್ರಾ. ಪಂ ಸದಸ್ಯರುಗಳಾದ ವಿಠಲ ದಾಸ್, ಶ್ರೀಮತಿ ಜಯಶ್ರೀ, ಮಣಿಕಂಠ,ಒಕ್ಕೂಟ ಅಧ್ಯಕ್ಷರಾದ ನಳಿನಾಕ್ಷಿ,ಉಪಾಧ್ಯಕ್ಷೆ ಶಶಿಕಲಾ ಚಾವಡಿ ಬಾಗಿಲು,ಕಾರ್ಯದರ್ಶಿ ಶ್ರೀಮತಿ ಮಮತ,ಕ್ರೀಡಾ ಕೂಟ ದ ತೀರ್ಪುದಾರರಾ ದ ವೀರನಾಥ ಮೊದಲಾದ ಗಣ್ಯರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಪಶು ಸಖಿ ಶ್ರೀಮತಿ ಪ್ರತಿಮಾ ವಂದಿಸಿ,ಕೃಷಿ ಉದ್ಯೋಗ ಸಖಿ ನಿಶ್ಮಿತಾ ಕಾರ್ಯಕ್ರಮ ದ ನಿರೂಪಣೆ ಗೈದರು. ಲಕ್ಕಿ ಡಿಪ್ ಅದೃಷ್ಟ ಶಾಲಿಗಳನ್ನು ಚೀಟಿ ಹೆಕ್ಕುವುದರ ಮೂಲಕ ಆರಿಸಲಾಯಿತು.ರಾಷ್ಟ್ರ ಗೀತೆ ಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.