ಮಾ.31 : ಪೆರುವಾಜೆ ಶಾಲಾ ಸಹಶಿಕ್ಷಕಿ ಲಲಿತಾ ಕುಮಾರಿ ಸೇವಾ ನಿವೃತ್ತಿ

0

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಶ್ರೀಮತಿ ಲಲಿತಾ ಕುಮಾರಿಯವರು ಮಾ.31 ರಂದು ಸೇವಾ ನಿವೃತ್ತಿಗೊಳ್ಖಲಿದ್ದಾರೆ‌.
ಸುದೀರ್ಘ 29 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಇವರು ಸೇವೆ ಸಲ್ಲಿಸಿರುತ್ತಾರೆ.


1996 ಜನವರಿ 13 ರಂದು ಮುಕ್ಕೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ ಬಳಿಕ 29.04.2015 ರಲ್ಲಿ ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳಲಿದ್ದಾರೆ.
ಇವರು ಪೆರುವಾಜೆ ಗ್ರಾಮದ ಕೃಷಿಕರಾದ ಗೋಪಾಲಕೃಷ್ಣ ಕೆ.ಎಸ್.ಮನವಳಿಕೆಯವರ ಪತ್ನಿಯಾಗಿದ್ದು ಇವರ ಪುತ್ರರಾದ ಶಿವಪ್ರಸಾದ್ ತಮಿಳುನಾಡಿನ ಕಂಪೆನಿಯೊಂದರಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸತ್ಯಗಣೇಶ್ ರವರು ಆಲಂಕಾರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.