
ಮುರುಳ್ಯ ಗ್ರಾಮದ ವಿವಿಧ ಕಡೆಗಳಲ್ಲಿ ಶಾಸಕರಿಂದ ಗುದ್ದಲಿ ಪೂಜೆ ನಡೆಯಿತು.

ಮುರುಳ್ಯ ಶಾಂತಿನಗರ ಶಾಲೆಯ ಮುಖ್ಯದ್ವಾರ ರಸ್ತೆ ಮತ್ತು ಕಾಂಕ್ರಿಟೀಕರಣಕ್ಕೆ ೫ ಲಕ್ಷ, ಗೋಳ್ತಿಲ, ಬರಮುಟ್ಟೇಲು , ಒಟೋಳಿ, ಹೆದ್ದಾರಿ, ಪೂದೆ, ರಸ್ತೆಗೆ ಶಾಸಕರ ೧೦ ಲಕ್ಷ ಪಂಚಾಯತ್ ೨ ಲಕ್ಷ, ಅಲೆಕ್ಕಾಡಿಯಿಂದ ಪಾರ್ಲ ಪರಿಶಿಷ್ಟ ಕಾಲನಿಗೆ ಶಾಸಕರ ವಿಶೇಷ ಅನುದಾನದಲ್ಲಿ ೨೫ ಲಕ್ಷ, ಮುರುಳ್ಯ ಅಲೆಕ್ಕಾಡಿ ಸರಕಾರಿ ಶಾಲೆಯ ಮುಖ್ಯ ದ್ವಾರ ರಸ್ತೆಗೆ ೫ ಲಕ್ಷ ಬಿಡುಗಡೆಗೊಂಡಿದ್ದು, ಈ ಎಲ್ಲಾ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯರವರು ಮಾ.೩೧ ರಂದು ನಡೆಸಿಕೊಟ್ಟರು.




ಈ ಸಂದರ್ಭದಲ್ಲಿ ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯ ಅನೂಪು ಬಿಳಿಮಲೆ, ಸ್ಥಳೀಯರಾದ ಜಗನ್ನಾಥ ಶೆಟ್ಟಿ, ಪುದೊಟ್ಟು, ವಾಸದೇವ ಗುಂಡ್ಲ, ಅಶೋಕ್ ಕುಮಾರ್, ಜಗನ್ನಾಥ ಪೂಜಾರಿ ಪಾರ್ಲ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಮೋನಪ್ಪ ಆಲೇಕಿ, ಶ್ರೀಮತಿ ಶಿಲಾವತಿ ಗೋಳ್ತಿಲ, ಮುರುಳ್ಯ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಬಾಲಕೃಷ್ಣ, ಕಾಣಿಯೂರು ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಕುಮಾರ್ ಎ, ಮುರುಳ್ಯ ಶಾಲಾ ದತ್ತು ಸ್ವೀಕೃತರು ಶ್ರೀಮತಿ ಮಧು ಪಿ ಆರ್, ಯತೀಶ್ ಪಾಲೋಲಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅವಿನಾಶ್ ದೇವರಮಜಲು, ಉಪಾಧ್ಯಕ್ಷೆ ಸವಿತಾ ಕರಿಂಬಿಲ, ಶಿಕ್ಷಕ ವೃಂದ, ಪೋಷಕರು, ಮುರುಳ್ಯ ಬಿಜೆಪಿ ಬೂತ್ ಅಧ್ಯಕ್ಷ ರೋಹಿತ್ ಹೆದ್ದಾರಿ, ಕಾರ್ಯದರ್ಶಿ ಪದ್ಮನಾಭ ಪೂದೆ , ಸ್ಥಳೀಯರಾದ ಜಯಂತ ಕೆ, ಪುಟ್ಟಣ್ಣ ಪೂದೆ , ಜಗನ್ನಾಥ ರೈ ಕೆ, ನವೀನ್ ಕುಮಾರ್ ಎಣ್ಮೂರು ಗುತ್ತು, ಶಶಿಕಲಾ ರೈ ಒಟೋಳಿ, ನಾಗೇಶ್ ಗೋಳ್ತಿಲ, ಬಾಬು ಗೌಡ ಬರಮುಟ್ಟೇಲು ಇನ್ನಿತರು ಭಾಗವಹಿಸಿದರು.


