
ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ಮುಖ್ಯ ಪೇಟೆಯಲ್ಲಿರುವ ಶ್ರೀ ಮಹಾವಿಷ್ಣು ಕಾಂಪ್ಲೆಕ್ಸ್ ನಲ್ಲಿ ಡಾ| ತಸ್ವಿನ್ ಯು.ಆರ್ ಮತ್ತು ರಾಜಗೋಪಾಲ ಯು. ಬಿ ಮಾಲಿಕತ್ವದ ನೂತನ “ಉಳುವಾರು ಮೆಡಿಕಲ್ಸ್” ಮಾ.31 ರಂದು ಶುಭಾರಂಭ ಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜಾರಾಮ ಕೀಲಾರು ರಿಬ್ಬನ್ ಕಟ್ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.




ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನವಮಿ ಸ್ಟೋರ್ ಮಾಲಕ ಯು. ಬಿ. ಚಕ್ರಪಾಣಿ , ಎಸ್. ಪಿ. ಲೋಕನಾಥ್ , ಸಂಪಾಜೆ ಗ್ರಾಂ.ಪಂ ಅಧ್ಯಕ್ಷೆ ಸುಮತಿ ಶಕ್ತಿ ವೇಲು, ಪೂರ್ಣಿಮಾ ಟೆಕ್ಸ ಟೇಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ, ರಾಮಚಂದ್ರ ಕಲ್ಲುಗದ್ದೆ, ಶ್ರೀಧರ ದುಗ್ಗಳ , ದಾಮೋದರ ಮಾಸ್ತರ್ ಗೂನಡ್ಕ, ವಿ.ವಿ ಬಾಲನ್, ಬಿ. ಕಿಶೋರ್ ಕುಮಾರ್ ,ಪ್ರಜ್ಞಾ ಯು.ಆರ್ , ಅಶ್ವಿನ್ ವಿ. ಪೃಥ್ವಿ.ಯು.ಆರ್, ರಂಜನ್ ಕಲ್ಲು ಗದ್ದೆ, ಅರ್ಜುನ್ ಕಲ್ಲುಗದ್ದೆ, ರವಿ , ಗಣೇಶ್ ಕಲ್ಲುಗುಂಡಿ , ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲೀಕ ರಾಜಗೋಪಾಲ ಯು. ಬಿ ಸರ್ವರನ್ನು ಸ್ವಾಗತಿಸಿ, ವಂದಿಸಿದರು.