ಸ್ವಾಮೀಜಿಯವರಿಂದ ಆಶೀರ್ವಚನ,ತಂತ್ರಿಯವರಿಂದ ದೀಪ ಪ್ರಜ್ವಲನೆ

ಆಲೆಟ್ಟಿ ಗ್ರಾಮ ವ್ಯಾಪ್ತಿಯ ಮೊರಂಗಲ್ಲುಶ್ರೀಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ಮೊರಂಗಲ್ಲು ತರವಾಡು ಮನೆಯ ಗೃಹ ಪ್ರವೇಶ ಹಾಗೂ ಧರ್ಮ ಚಾವಡಿಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ಮತ್ತು ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ ಹಾಗೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು.

ಮಾ.30 ರಂದು
ಪೂರ್ವಾಹ್ನ ಹಸಿರುವಾಣಿ ಮೆರವಣಿಗೆ ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ,
ಸಂಜೆ ತಂತ್ರಿವರ್ಯರ ಆಗಮನವಾಗಿದೇವತಾ ಪ್ರಾರ್ಥನೆ,ಆಚಾರ್ಯವರಣ, ಪುಣ್ಯಾಹವಾಚನ, ಸುದರ್ಶನ ಹೋಮ, ಪ್ರೇತಾವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಚಾಟನೆ, ಉಚ್ಚಾಟನೆ ಬಲಿ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ರಾಕ್ರೋಫ ಹೋಮ, ವಾಸ್ತುಹೋಮ, ವಾಸ್ತು ಬಲಿ, ವಾಸ್ತು ಪುಣ್ಯಹಾಂತ, ಪ್ರಸಾದ ವಿತರಣೆಯಾಗಿಅನ್ನಸಂತರ್ಪಣೆಯಾಯಿತು.

ಮಾ.31ರಂದು
ಪೂರ್ವಾಹ್ನ ತಂತ್ರಿಯವರ ನೇತೃತ್ವದಲ್ಲಿ
ಗಣಪತಿ ಹೋಮ, ತಿಲಾ ಹೋಮ, ಪವಮಾನ ಹೋಮ, ಚಕ್ರಾಬ್ದ ಪೂಜೆ, ದ್ವಾದಶಮೂರ್ತಿ ಆರಾಧನೆ, ಬ್ರಹ್ಮಕಲಶ ಪೂಜೆ, ಪೂರ್ವಾಹ್ನ
ಗಂಟೆ 9:04ರ ಸುಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ ಹಾಗೂ ಶ್ರೀ ವೆಂಕಟ್ರಮಣ ದೇವರ ಮುಡಿಪು ಪೂಜೆಯು ಮತ್ತು ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕ ನಡೆದುಮಹಾಪೂಜೆಯಾಗಿ ನಿತ್ಯ ನೈಮಿತ್ಯಾದಿಗಳ ನಿರ್ಣಯವಾಗಿ ಪ್ರಸಾದ ವಿತರಣೆಯಾಯಿತು.
ಧಾರ್ಮಿಕ ಸಭೆ:
ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ಬೆಳಗ್ಗೆ ನಡೆಯಿತು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿವರ್ಯರು ದೀಪ ಪ್ರಜ್ವಲಿಸಿ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವರಾದ ರಮಾನಾಥ ರೈ, ಶಾಸಕಿ ಕು.ಭಾಗೀರಥಿ ಮುರುಳ್ಯ,
ಧಾರ್ಮಿಕ ದತ್ತಿ ಇಲಾಖೆಯ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ
ಜಯಪ್ರಕಾಶ್ ಕುಂಚಡ್ಕ,ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾವಸಂತ ಆಲೆಟ್ಟಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಬೆಂಗಳೂರು ಸಹಕಾರನಗರದ ಗಣಪತಿ ದೇವಸ್ಥಾನದ ಅಧ್ಯಕ್ಷ ಬಿ.ಯಂ. ದೇವರಾಜಪ್ಪನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಮಧ್ಯಾಹ್ನ ಅನ್ನ ಸಂತರ್ಪಣೆಯಾಯಿತು.
ಅಪರಾಹ್ನ ಸ್ಥಳೀಯ ಆಲೆಟ್ಟಿ ಶ್ರೀ ಸದಾಶಿವ ಭಜನಾಸಂಘದವರಿಂದಭಜನಾ ಸಂಕೀರ್ತನೆ ಹಾಗೂ ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಭಜಕರಿಂದ ಕುಣಿತ ಭಜನೆಯು ಪ್ರದರ್ಶನವಾಯಿತು.

ಸಂಜೆ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ನೂತನ ತರವಾಡು ಮನೆಯಲ್ಲಿ ಅರ್ಚಕರಿಂದ ಚೌಕಿ ಪೂಜೆಯಾಗಿ
ಪ್ರಸಾದವಿತರಣೆಯಾಯಿತು. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯ 3 ನೇ ಮೇಳದ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು. ರಾತ್ರಿ ಆಗಮಿಸಿದ ಸರ್ವರಿಗೂ ಅನ್ನ ಸಂತರ್ಪಣೆಯಾಯಿತು. ಮೊರಂಗಲ್ಲು ಕುಟುಂಬದ ಯಜಮಾನ ಉಮೇಶ್ ಶೆಟ್ಟಿ ಯಂ, ಅಧ್ಯಕ್ಷ ಯಂ.ಗುರುಪ್ರಸಾದ್ ರೈ ಮೊರಂಗಲ್ಲು ಹಾಗೂ ಕುಟುಂಬದ ಸದಸ್ಯರು ಸರ್ವರನ್ನೂ ಸ್ವಾಗತಿಸಿದರು. ಮೊರಂಗಲ್ಲು ಬೈಲಿನ ಸಮಸ್ತರು ಮತ್ತು ಸಮಿತಿಯ ಸಂಚಾಲಕರು ಮತ್ತು ಸಹಸಂಚಾಲಕರು, ಸದಸ್ಯರು, ಮಹಿಳೆಯರು ಸ್ವಯಂ ಸೇವಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿದರು.