ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ನಡೆದ ತರವಾಡು ಮನೆಯ ಗೃಹಪ್ರವೇಶ ಕಾರ್ಯಕ್ರಮದ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಚಿಂತನೆ ಇರಿಸಿದ ಜ್ಯೋತಿಷ್ಯರಾದ ಸತ್ಯನಾರಾಯಣ ಎನ್. ಭಟ್ ಪಂಜ ರವರನ್ನು ಮೊರಂಗಲ್ಲು ಕುಟುಂಬಸ್ಥರ ಪರವಾಗಿ ಸನ್ಮಾನಿಸಲಾಯಿತು.
ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ರವೀಶ್ ತಂತ್ರಿಯವರ ಸಮ್ಮುಖದಲ್ಲಿ ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ಸನ್ಮಾನಿಸಿದರು. ಕುಟುಂಬದ ಯಜಮಾನರಾದ ಉಮೇಶ್ ಶೆಟ್ಟಿ ಮೊರಂಗಲ್ಲು, ಶ್ರೀಮತಿ ಪುಷ್ಪಾವತಿ ಮೊರಂಗಲ್ಲು, ಶ್ರೀಮತಿ ಆಶಿತಾ ಪಿ.ಶೆಟ್ಟಿ ಮೊರಂಗಲ್ಲು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.