ಉಬರಡ್ಕ: ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧನಸಹಾಯ

0

ಉಬರಡ್ಕ ಮಿತ್ತೂರು ಗ್ರಾಮದ ಸೂ0ತೋಡು ಬಾಬು ಭಂಡಾರಿ ಅವರ ಪುತ್ರ ಜೀವನ್ ಭಂಡಾರಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇವರ ಚಿಕಿತ್ಸೆಗಾಗಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ 15000 ಧನ ಸಹಾಯದ ಚೆಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ರಾಹುಲ್ ನಡುಮುಟ್ಲು ಕಾರ್ಯದರ್ಶಿ ಸಂದೀಪ್ ಮದುವೆಗದ್ದೆ ಮತ್ತು ಖಜಾಂಜಿ ಅಪ್ಪಯ್ಯ ಸೂಂತೋಡು ಹಾಗೂ ಮತ್ತಿತರರು ಉಪಸ್ಥಿತರಿದ್ದರು.