ಕೂಟೇಲು ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು ಇದರ ಆಶ್ರಯದಲ್ಲಿ ಸೂರ್ಯ ಬೆಳಕಿನ ಕಬಡ್ಡಿ ಪoದ್ಯಾಟದ ಉದ್ಘಾಟನೆ

0

ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು (ರಿ) ಇದರ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ 8 ನೇ ತರಗತಿಯಿಂದ 10 ನೇ ತರಗತಿಯ ಪ್ರೌಢ ಶಾಲಾ ಮಕ್ಕಳ 8 ತಂಡಗಳ ಲೀಗ್ ಮಾದರಿಯ ಸೂರ್ಯ ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭವು ಸರಕಾರಿ ಪ್ರೌಢ ಶಾಲೆ ದುಗ್ಗ ಲಡ್ಕ ಕ್ರೀಡಾಂಗಣದಲ್ಲಿ ಏ.13 ರಂದು ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಶಕ್ತಿ ಫ್ರೆಂಡ್ಸ್ ಕ್ಲಬ್ (ರಿ)ಕೂಟೇಲು ಮಾಜಿ ಅಧ್ಯಕ್ಷ ಸೆಲ್ವ ರಾಜ್ ಕೂಟೇಲು ತೆಂಗಿನ ಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ನಿವೃತ್ತ ತಾಲೂಕು ಆರೋಗ್ಯಅಧಿಕಾರಿ ಡಾ ನಂದಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರ ರಿಗೆ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಬಶೀರ್ ಆರ್. ಬಿ, ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರರು ಶಿವಕುಮಾರ್ ಕೂಟೇಲು, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು (ರಿ) ಗೌರವಾಧ್ಯಕ್ಷ ವಿಜಯಕಾಂತ್, ಕರ್ನಾಟಕ ಕಾರ್ಮಿಕ ಸಂಘ (ರಿ)ಸುಳ್ಯ ಉಪಾಧ್ಯಕ್ಷ ಬಾಲ ಸುಬ್ರಹ್ಮಣ್ಯ ಕೂಟೇಲು, ಶಕ್ತಿ ಫ್ರೆಂಡ್ಸ್ ಕ್ಲಬ್ (ರಿ)ಕೂಟೇಲು ಸೆಲ್ವ ರಾಜ್ ಕೂಟೇಲು , ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು ಪದಾಧಿಕಾರಿಗಳು, ಸರ್ವ ಸದಸ್ಯರು, ಊರಿನವರು , ಆಟಗಾರರು, ಪಂದ್ಯಾಕೂಟದ ತೀರ್ಪುಗಾರರು, ಉಪಸ್ಥಿತರಿದ್ದರು.

ಕಬಡ್ಡಿ ಪಂದ್ಯಾಟದ ವೀಕ್ಷಕ ವಿವರಣೆಗಾರ ಪ್ರಸಾದ್ ಕಾಟೂರು ಸ್ವಾಗತಿಸಿ ವಂದಿಸಿದರು.