ನಂಬಿಕೆದಾಯೆ” ತುಳು ನಾಟಕ ಪ್ರದರ್ಶನ
ಆಲೆಟ್ಟಿ ಗ್ರಾಮದ ಕುಂಚಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಆಶ್ರಯದಲ್ಲಿ ಮಾಮೂಲು ಪ್ರಕಾರ ನಡೆಯುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದು ನಡೆಯಲಿರುವುದು.
ಬೆಳಗ್ಗೆ ಗಣಪತಿ ಹವನವಾಗಿ ಶುದ್ಧಿ ಕಲಶ ಮೇಲೇರಿಗೆ ಕೂಡುವುದು ಸಂಜೆ ದೈವಸ್ಥಾನದಲ್ಲಿ ಕೈವೀದ್ ನಡೆಯಲಿದೆ. ಬಳಿಕ ಶ್ರೀ ದೈವದ ಭಂಡಾರ ತೆಗೆದು ಒತ್ತೆಕೋಲ ಮಜಲಿಗೆ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶವಾಗಲಿದೆ. ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 9.00 ರಿಂದ ಪುತ್ತೂರು ಬಲ್ನಾಡು ಸಂಸಾರ ಕಲಾವಿದೆರ್ ತಂಡದ ಕಲಾವಿದರಿಂದ ನಂಬಿಕೆದಾಯೆ ಎಂಬ ತುಳು ನಾಟಕ ಪ್ರದರ್ಶನ ವಾಗಲಿರುವುದು. ನಾಳೆ ಪ್ರಾತ:ಕಾಲದಲ್ಲಿ ಶ್ರೀ ದೈವದ ಮೇಲೇರಿ ಪ್ರವೇಶ ವಾಗಲಿದೆ .ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಚಡ್ಕ ರವರು ತಿಳಿಸಿದ್ದಾರೆ.