ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ಇಂದಿನಿಂದ ಶ್ರೀ ದೈವಗಳ ನೇಮೋತ್ಸವವು ಜರುಗಲಿರುವುದು.
ಎ.1 ರಂದು
ಪೂರ್ವಾಹ್ನ ಶ್ರೀ ಭಗವತಿ ಸೇವೆ, ಚಂಡಿಕಾ ಶಾಂತಿ ಹೋಮವು ನಡೆಯಲಿದೆ.

ಬಳಿಕ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆಯಾಗಲಿದೆ. ಸಂಜೆ ಗಂಟೆ 7:00ರಿಂದ ಭಗವತಿ ಸೇವೆಯಾಗಿ,ರಾತ್ರಿ ಗಂಟೆ 8:00ಕ್ಕೆ ಶ್ರೀ ದೈವಗಳ ಭಂಡಾರ ಏರುವುದು ನಂತರ ಅನ್ನಸಂತರ್ಪಣೆಯಾಗಲಿದೆ. ರಾತ್ರಿ ಗಂಟೆ 9:00 ರಿಂದ ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮೂಕಾಂಬಿಕಾ ಗುಳಿಗ ದೈವ,ಶ್ರೀಕುಪ್ಪೆಪಂಜುರ್ಲಿ, ಶ್ರೀ ಪಾಷಾಣಮೂರ್ತಿ ಹಾಗೂ ಶ್ರೀ ಗುಳಿಗ ದೈವಗಳ ಕೋಲವು ನಡೆಯಲಿರುವುದು.
ನಾಳೆ ಪೂರ್ವಾಹ್ನ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವವು ನಡೆದು ಗಂಧಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗುವುದರೊಂದಿಗೆ ನೇಮೋತ್ಸವ ಸಂಪನ್ನವಾಗಲಿರುವುದು ಎಂದು ದೈವಸ್ಥಾನದ ಅಧ್ಯಕ್ಷ ಯಂ. ಗುರುಪ್ರಸಾದ್ ರೈ ಯವರು ತಿಳಿಸಿದ್ದಾರೆ.