Home ನಿಧನ ಸುಳ್ಯದ ಕೋಟೆಕ್ಕಲ್ ಆರ್ಯವೈದ್ಯ ಶಾಲೆಯ ವೈದ್ಯ ಕುಂಞಿರಾಮನ್ ವೈದ್ಯರ್ ನಿಧನ

ಸುಳ್ಯದ ಕೋಟೆಕ್ಕಲ್ ಆರ್ಯವೈದ್ಯ ಶಾಲೆಯ ವೈದ್ಯ ಕುಂಞಿರಾಮನ್ ವೈದ್ಯರ್ ನಿಧನ

0

ಸುಳ್ಯದ ಹಿರಿಯ ಆಯುರ್ವೇದ ಪಂಡಿತ ಹಾಗೂ ಕೋಟೆಕ್ಕಲ್ ಆರ್ಯವೈದ್ಯ ಶಾಲೆಯ ವೈದ್ಯರಾಗಿದ್ದ ಕುಂಞಿರಾಮನ್ ವೈದ್ಯರ್ ರವರು ಅಲ್ಪಕಾಲದ ಅಸೌಖ್ಯದಿಂದ ಎ.1ರಂದು ನಿಧನರಾದರು.

ಅವರಿಗೆ (80) ವರ್ಷ ವಯಸ್ಸಾಗಿತ್ತು. ಕಳೆದ 60 ವರ್ಷಗಳಿಂದ ಸುಳ್ಯದಲ್ಲಿ ಕೋಟೆಕಲ್ಲು ಔಷದಿಗಳ ಹಂಚಿಕೆ ದಾರರಾಗಿದ್ದ ಇವರು ಆಯುರ್ವೇದ ಔಷದಿ ವೃತ್ತಿಯಲ್ಲಿ ಸುಳ್ಯದಲ್ಲಿ ತುಂಬಾ ಹೆಸರುವಾಸಿಯಾಗಿದ್ದರು.

ಇವರು ಕಳೆದ ಕೆಲವು ತಿಂಗಳುಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಇದೀಗ ಸುಳ್ಯದ ಕೆ ವಿ ಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌ ಎಂದು ತಿಳಿದು ಬಂದಿದೆ.

ಇವರ ವೃತ್ತಿ ಜೀವನದಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದು ಹಲವು ಪ್ರಶಸ್ತಿಗಳು ಲಭಿಸಿದೆ. ಸುಳ್ಯದಲ್ಲಿ ಪ್ರೆಂಡ್ಸ್ ಕ್ಲಬ್ ರಚಿಸಿ, ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಸಂಘಟಿಸಿದ ಕೀರ್ತಿಯು ಇವರಿಗಿತ್ತು,

ಮೃತರು, ಪುತ್ರರಾದ ಪ್ರಸನ್ನ ಕುಮಾರ್,ಆಯುರ್ ವೇದ ವೈದ್ಯ ಪ್ರಶಾಂತ್ ಕುಮಾರ್ ,ಪುತ್ರಿ ಪ್ರಸಿತಾ ಸೇರಿದಂತೆ, ಸಹೋದರರು ಹಾಗೂ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.

ಇವರ ಅಂತಿಮ ದರ್ಶನಕ್ಕೆ ಸುಳ್ಯದ ಕೆರೆಮೂಲೆಯಲ್ಲಿರುವ ಇವರ ನಿವಾಸದಲ್ಲಿ ಇಂದು ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬದ ಮೂಲದಿಂದ ತಿಳಿದು ಬಂದಿದೆ.

NO COMMENTS

error: Content is protected !!
Breaking