ಕಲ್ಮಕಾರಿನ ಪನ್ನೆ ಎಂಬಲ್ಲಿ ಬೈಕ್ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರೂ ಗಾಯಗೊಂಡ ಘಟನೆ ಎ.2 ರಂದು ವರದಿಯಾಗಿದೆ.
ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ಉದ್ಯೋಗಿ ಸಂತೋಷ್ ಕೊಪ್ಪಡ್ಕ ಎಂಬವರು ತನ್ನ ಕರ್ತವ್ಯ ಮುಗಿಸಿ ಸಂಜೆ ವೇಳೆ ಮನೆಗೆ ತೆರಳುತ್ತಿದ್ದಾಗ ತಾನು ಚಲಾಯಿಸುತಿದ್ದ ಬುಲೆಟ್ ಗೆ ಎದುರುಗಡೆಯಿಂದ ಬಂದ ಹೂವಯ್ಯ ಕೋನಡ್ಕ ಎಂಬವರ ಬೈಕ್ ಡಿಕ್ಕಿ ಹೊಡೆದಿದೆ. ಕಾರೊಂದನ್ನು ಓವರ್ ಟೇಕ್ ಮಾಡಿ ಬಂದ ಬೈಕ್ ಬುಲೆಟ್ ಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.
ಪರಿಣಾಮ ಎರಡೂ ಬೈಕ್ ಗಳು ರಸ್ತೆ ಬಿದ್ದಿದೆ. ಡಿಕ್ಕಿ ರಭಸಕ್ಕೆ ಇಬ್ಬರಿಗೂ ಗಾಯಗಳಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು.