ಉಬರಡ್ಕ ಮಿತ್ತೂರು ಗ್ರಾಮದ ಅಮೈ – ಕೊಡಿಯಾಲಬೈಲು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಮಿತಿ ವತಿಯಿಂದ 46 ನೇ ವಾರ್ಷಿಕ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಎ.10 ಮತ್ತು ಎ.11 ರಂದು ನಡೆಯಲಿದೆ.
ಎ.10 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಸಂಜೆ ಗಂಟೆ 4.00 ಕ್ಕೆ ಊರವರ ಕೂಡುವಿಕೆ,ರಾತ್ರಿ ಗಂಟೆ 7.00 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು.
ರಾತ್ರಿ ಗಂಟೆ 7.30 ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ ಗಂಟೆ 9.30 ಕ್ಕೆ ಕುಲ್ಚಾಟ ನಡೆಯಲಿದೆ.
ಎ.11 ರಂದು ಪ್ರಾತ:ಕಾಲ ಗಂಟೆ 5.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನಡೆದ ಬಳಿಕ ಗಂಟೆ 7.00 ರಿಂದ ಪ್ರಸಾದ ವಿತರಣೆ ನಡೆಯಲಿದೆ.
ಭಜನೆ, ಸಾಂಸ್ಕೃತಿಕ ಸಂಭ್ರಮ
ಎ.10 ರಂದು ರಾತ್ರಿ ಗಂಟೆ 8.00 ರಿಂದ 9.00 ರತನಕ ಶ್ರೀ ವಿಷ್ಣು ಯುವಕ ಮಂಡಲ ಕೊಡಿಯಾಲಬೈಲು,ಶ್ರೀ ವರಲಕ್ಷ್ಮೀ ಯುವತಿ ಮಂಡಲ ಅಮೈ ಕೊಡಿಯಾಲಬೈಲು ,ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಕುತ್ತನೊಟ್ಟೆ ಇವರಿಂದ ಭಜನೆ ನಡೆಯಲಿದೆ.
ರಾತ್ರಿ ಗಂಟೆ 9.00 ರಿಂದ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ ಗಂಟೆ 10.30 ರಿಂದ ಸಾಂಸ್ಕೃತಿಕ ಸಂಭ್ರಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲು ಮತ್ತು ಅಂಗನವಾಡಿ ಕೇಂದ್ರ ಕೊಡಿಯಾಲಬೈಲು ಇವರಿಂದ ನಡೆಯಲಿದೆ.
ಬಳಿಕ ನಿತಿನ್ ಹೊಸಂಗಡಿ ಇವರ ನಿರ್ದೇಶನದಲ್ಲಿ ಶ್ರೀ ದುರ್ಗಾ ಕಲಾ ತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯಿಸುವ ಕಲ್ಜಿಗದ ಕಾಳಿ ಮಂತ್ರದೇವತೆ ನಡೆಯಲಿದೆ.