ಕಾರಿನಲ್ಲಿ ಯುವಕರ ಹುಚ್ಚಾಟ, ಕಾರಿನ ಮೇಲ್ಭಾಗದಲ್ಲಿ ಕುಳಿತು ಪ್ರಯಾಣ

0

ಸ್ಥಳೀಯರಿಂದ ವೀಡಿಯೋ ಮಾಡಿ ಠಾಣೆಗೆ ರವಾನೆ, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

ಸಂಪಾಜೆ ಕಡೆಯಿಂದ ಸುಳ್ಯ ರಸ್ತೆಯಲ್ಲಿ ಸಂಚರಿಸುತಿದ್ದ ಕಾರಿನಲ್ಲಿ
ಒಟ್ಟು ಏಳು ಜನ ಕಾರಿನಲ್ಲಿ ಪ್ರಯಾಣಿಸುತಿದ್ದ ವೇಳೆ ಚಲಿಸುತಿದ್ದ ಕಾರಿನಲ್ಲಿ ಐವರು ಯುವಕರು ಕಾರಿನ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮಾಡುತ್ತಾ ಇತರ ವಾಹನ ಗಳಿಗೆ ತೊಂದರೆ ಉಂಟು ಮಾಡಿ ಹುಚ್ಚಾಟ ಮೆರೆದ ಘಟನೆ ಏ 5 ರಂದು ಸಂಜೆ ನಡೆದಿದೆ.

5 ಮಂದಿ ಯುವಕರು ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ
ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಾ ಪುಂಡಾಟ ಮಾಡುತ್ತಾ ಅತಿರೇಖದಿಂದ ವರ್ತಿಸಿದ್ದಾರೆ.

ಈ ವೇಳೆ ಇವರ ಕಾರಿನ ಹಿಂದೆ ಬರುತಿದ್ದ
ಬೇರೆ ವಾಹನ ಸವಾರರು ಘಟನೆಯ ವೀಡಿಯೋ ವನ್ನು ಮಾಡಿ ಅದನ್ನು ಸುಳ್ಯ ಪೊಲೀಸ್ ಠಾಣೆಗೆ ರವಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ ಪಿ ರವರು ಕೂಡಲೇ ಕಾರ್ಯ ಪ್ರವೃತ್ತ ರಾಗಿ ಯುವಕರನ್ನು ಸುಳ್ಯ ಪೇಟೆಯಲ್ಲಿ ವಶಕ್ಕೆ ಪಡೆದು ಅವರ ಮೇಲೆ ಅ ಕ್ರ 50/25 ಕಲಂ 281ಬಿ ಎನ್ ಎಸ್ 2023 ಮತ್ತು 184 ಐ ಎಂ ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಕ್ಕೊಂಡಿದ್ದಾರೆ.