ಇಂದು ಉಲ್ಲಾಕುಲ ದರ್ಶನ – ಬಲ್ಲಾಳರ ಕಾಣಿಕೆ
ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವ ನಡೆಯುತ್ತಿದ್ದು, ಇಂದು ತೋಟಚಾವಡಿಯಲ್ಲಿ ಉಲ್ಲಾಕುಳ ದರ್ಶನ, ಬಲ್ಲಾಳರ ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ಜಾತ್ರೋತ್ಸವ ಸಮಿತಿ ಅಧ್ಯಕ ಅಚ್ಚುತ ಮಾಸ್ತರ್ ಸೇರಿದಂತೆ ಪ್ರಮುಖರಾದ ಹರೀಶ್ ಕಂಜಿಪಿಲಿ, ಯುವರಾಜ ಜೈನ್ ಬಲ್ನಾಡುಪೇಟೆ ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಚಾಕರಿಯವರು ಭಕ್ತರು ಉಪಸ್ಥಿತರಿದ್ದರು.