ಸತತ ಪ್ರಯತ್ನವೇ ನಮ್ಮ ಅಭಿವೃದ್ಧಿಗೆ ದಾರಿ: ಡಾ. ಉಜ್ವಲ್ ಯು.ಜೆ.

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 2024-25ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ
ಎ. 8 ರಂದು ಶಾಲಾ ಸಭಾಂಗಣದಲ್ಲಿ ವಿದಾಯ ಕೂಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದ್ವೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ವಿದ್ಯಾರ್ಥಿಗಳಿಗೆ ಬೆಳಕಿನ ಹಣತೆಯನ್ನು ನೀಡಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ” ನಿಮ್ಮಲ್ಲಿರುವ ಎಲ್ಲಾ ಧನಾತ್ಮಕ ಭಾವನೆಗಳು, ಎಲ್ಲಾ ಮೌಲ್ಯಗಳು ದೀಪದ ಬೆಳಕಿನಂತೆ ಬೆಳಕು ನೀಡಲಿ” ಎಂದು ಶುಭ ಹಾರೈಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ‘ಯಾವಾಗಲೂ ಧನಾತ್ಮಕವಾಗಿ ಯೋಚಿಸಿ, ಸತತ ಪ್ರಯತ್ನವೇ ನಮ್ಮ ಅಭಿವೃದ್ಧಿಗೆ ದಾರಿ’ ಎಂದರು.
ಬಳಿಕ ವಿದ್ಯಾರ್ಥಿಗಳಿಗೆ ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಶಿಕ್ಷಕಿಯರಾದ ಭವ್ಯ ಅಟ್ಲೂರು, ಹೇಮಾ ವೈಲಾಯ ಮತ್ತು ಲಲಿತಾ ಭಟ್ ಶುಭ ಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಹಲವು ವರ್ಷಗಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ
ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಾಲಾ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲೆ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಹಲವು ಮನೋರಂಜನಾತ್ಮಕ ಆಟಗಳನ್ನು ಏರ್ಪಡಿಸಲಾಯಿತು. ಶಿಕ್ಷಕವೃಂದದವರು ವಿದ್ಯಾರ್ಥಿಗಳನ್ನು ಹಾಡಿನ ಮೂಲಕ ಮನರಂಜಿಸಿದರು.
ಕಾರ್ಯಕ್ರಮವನ್ನು ಶಾಲಾ ಶೈಕ್ಷಣಿಕ ಸಂಯೋಜನಾಧಿಕಾರಿ ರೇಣುಕಾ ಉತ್ತಪ್ಪ ನಿರೂಪಿಸಿದರು. ಭವ್ಯ ಕೆ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ನ್ನು ಕೆವಿಜಿ ಡೆಂಟಲ್ ಕಾಲೇಜಿನ ನಿರ್ದೇಶಕರಾದ ಮೌರ್ಯ ಆರ್ ಕುರಂಜಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ರೇಷ್ಮಾ ಭಟ್ ಮತ್ತು ಶ್ರೀಮತಿ ನೀಲವೇಣಿಯವರ ಪ್ರಾರ್ಥಿಸಿದರು.