ಎ.10 ರಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಭೇಟಿ

0

ಹಲವು ಸಮಾಜಮುಖಿ ಕಾರ್ಯಕ್ರಮಗಳ ಉದ್ಘಾಟನೆ

ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಏ. 10 ರಂದು ನಡೆಯುವ ಜಿಲ್ಲಾರಾಜ್ಯಪಾಲರ ವಿಕ್ರಂ ದತ್ತಾ ಭೇಟಿಯ ಸಂದರ್ಭದಲ್ಲಿ ಹಲವು ಮಹತ್ವದ ಸಮಾಜಮುಖಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ನವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇವುಗಳಲ್ಲಿ ಪ್ರಮುಖವಾಗಿ, ಪಂಜ ಗ್ರಾಮದ ವಿಶೇಷಚೇತನ ಮಹಿಳೆ ಮೀನಾಕ್ಷಿ ಅವರಿಗೆ ನೂತನವಾಗಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ.
ಕೊಂಬಾರು ಹಾಗೂ ಕೆಂಜಾಳ ಗ್ರಾಮಗಳಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ,
ಏನೆಕಲ್ಲು ಅಂಗನವಾಡಿಗೆ ಕ್ರೀಡಾ ಸಾಮಗ್ರಿಗಳ ಹಸ್ತಾಂತರ, ಏನೆಕಲ್ಲು ರೈತ ಯುವಕ ಮಂಡಳಿಗೆ ಶುದ್ಧ ಕುಡಿಯುವ ನೀರಿನ ಘಟಕ,
ಸುಂದರ ವಾಲಗದಕೇರಿ ಮನೆಗೆ ಶೌಚಾಲಯ ನಿರ್ಮಾಣ ಮಾಡಲಾಗಿದ್ದು ಇದರ ಹಸ್ತಾಂತರ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳ ಸಮಾರೋಪವಾಗಿ, ಏನೆಕಲ್ಲು ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಸಂಜೆ 4 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ನಡೆಯಲಿದೆ. ಜೊತೆಗೆ ತೀರಾ ಹಿಂದುಳಿದ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಧನ, ಅಗತ್ಯ ವಸ್ತುಗಳ ಹಸ್ತಾಂತರ ಕೂಡ ನಡೆಯಲಿದೆ.
ಎಂದು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ತಿಳಿಸಿದರು. ಈ ವೇಳೆ, ಮಾಜಿ ಅಧ್ಯಕ್ಷರು ಗೋಪಾಲ ಎಣ್ಣೆಮಜಲು, ಕಾರ್ಯದರ್ಶಿ ಚಿದಾನಂದ ಕುಳ, ಹಾಗೂ ಸದಸ್ಯ ನವೀನ್ ವಾಲ್ತಾಜೆ ಉಪಸ್ಥಿತರಿದ್ದರು.l