ಅದ್ದೂರಿ ಮೆರವಣಿಗೆ ; ವಿವಿಧ ಸಂಘ ಸಂಸ್ಥೆಗಳಿಂದ ಗೌರವ

ಸುಳ್ಯ ಸರಕಾರಿ ಪದವಿ ಪೂರ್ವ ಪೂರ್ವ ಕಾಲೇಜಿನಲ್ಲಿ 3 ದಶಕಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಾ.31ರಂದು ನಿವೃತ್ತರಾದ ನಟರಾಜ್ ಎಂ.ಎಸ್. ರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಎ.9ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಾರ್ವಜನಿಕ ಅಭಿನಂದನಾ ಸಮಾರಂಭದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ
ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಡಾ.ನಟರಾಜ ಎಂ.ಎಸ್. ರನ್ನು ಅಭಿನಂದಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ ಅಭಿನಂದನಾ ಭಾಷಣ ಮಾಡಿ “ನಟರಾಜರು ದೂರದ ಮಂಡ್ಯದವರಾದರೂ ಇಂದು ಸುಳ್ಯದವರೇ ಆಗಿದ್ದಾರೆ. ಶಿಸ್ತು ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸಿದ ಅವರು ಛಲವಾಧಿಯಾಗಿ ಮುನ್ನಡೆದರು. ಅವರಿಗೆ ಊರಿನ ಬೆಂಬಲವೂ ದೊರೆತಿದೆ” ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕಿರಿ, ನಿವೃತ್ತ ಉಪನ್ಯಾಸಕ ಲಿಂಗಪ್ಪ ಗೌಡ ಕೇರ್ಪಳ, ನ.ಪಂ. ಸದಸ್ಯರುಗಳಾದ ಡೇವಿಡ್ ಧೀರಾ ಕ್ರಾಸ್ತ, ಎಂ.ವೆಂಕಪ್ಪ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ಜನಾರ್ದನ ಮಾಸ್ತರ್ ಗಣಿತ ಅಧ್ಯಯನ ಕೇಂದ್ರದ ಡಾ.ಜ್ಞಾನೇಶ್ ಎನ್.ಎ., ಸುಳ್ಯ ಎಸ್.ಐ.ಸಂತೋಷ್ ಕುಮಾರ್, ಸುಳ್ಯ ತಾಲೂಕು ಕ್ರೀಢಾಧಿಕಾರಿ ಆಶಾ ನಾಯಕ್,
ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ವೇದಿಕೆಯಲ್ಲಿ ಇದ್ದರು.
ನಟರಾಜ ಎಂ.ಎಸ್. ರನ್ನು ಪೇಟ, ಹಾರ, ಫಲ ತಾಂಬೂಲ, ನೆನಪಿನ ಕಾಣಿಕೆಯಾಗಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು. ವಿವಿಧ ಸಂಘ ಸಂಸ್ಥೆಗಳವರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಗೌರವಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಟರಾಜ ರನ್ನು ಮೆರವಣಿಗೆಯಲ್ಲಿ ಸಭಾ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಕು. ಪೂಜಾಶ್ರೀ ಪ್ರಾರ್ಥನೆ. ಹಿರಿಯ ವಿದ್ಯಾರ್ಥಿ ಸಂಘದ
ಪಿ.ಬಿ.ಸುಧಾಕರ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.