ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜಿನ ಕೃತಕ ದಂತ ಚಿಕಿತ್ಸಾ ವಿಭಾಗದಿಂದ ಎ. ೦೮ರಂದು ಕಾಲೇಜಿನ ಸಭಾಂಗಣದಲ್ಲಿ ಪೇಟೆಂಟ್ ಮತ್ತು ಫಂಡಿಂಗ್ ಇನ್ ಪ್ರೋಸ್ತೋಡೋಂಟಿಕ್ಸ್ ವಿಚಾರದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಯೇನಪೋಯ ಯುನಿರ್ವಸಿಟಿಯ ಡಾ| ಸವಿತಾ ದಂಡೆಕೇರಿ ಹಾಗೂ ಡಾ. ಫಹೀಝಾರವರು ತರಬೇತಿ ನೀಡಿದರು. ಹೊಸ ಆವಿಷ್ಕಾರಗಳನ್ನು ಪೇಟೆಂಟ್ ಮಾಡುವ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ ಧನ ಸಹಾಯ ಪಡೆಯುವ ವಿಧಾನಗಳನ್ನು ಪ್ರಸ್ತುತಪಡಿಸಲಾಯಿತು.
ಸಮಾರಂಭದ ಆರಂಭದಲ್ಲಿ ಕೃತಕ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ| ಸುಹಾಸ್ ರಾವ್ ಕೆ. ರವರು ಎಲ್ಲರನ್ನು ಸ್ವಾಗತಿಸಿದರು. ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಯುತ ಮೌರ್ಯ ಆರ್. ಕುರುಂಜಿ ಯವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ಸಂಸ್ಥೆಯ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ.ಯವರು ಪೇಟೆಂಟ್ ಮತ್ತು ಫಂಡಿಂಗ್ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ರವರು ಕಾರ್ಯಾಗಾರಕ್ಕೆ ಶುಭ ಹಾರೈಸಿದರು. ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ದೇವಿಪ್ರಸಾದ್ ನೂಜಿಯವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕಾರ್ಯಕ್ರಮಕದ ಕೊನೆಯಲ್ಲಿ ಡಾ. ವಿನಯಾ ಮುರಳಿಯವರು ವಂದನಾರ್ಪಣೆಗೈದರು. ಉಪಪ್ರಾಂಶುಪಾಲೆ ಡಾ. ಶೈಲಾ ಪೈ, ಎಂಡೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಪ್ರಸಾದ್ ಎಲ್., ಪೆರಿಯೋಡಾಂಟಾಲಾಜಿ ವಿಭಾಗದ ಮುಖ್ಯಸ್ಥ ಡಾ. ಎಂ.ಎಂ. ದಯಕರ್. ಆಡಳಿತಾಧಿಕಾರಿ ಶ್ರೀಯುತ ಬಿ.ಟಿ. ಮಾಧವ, ಕೃತಕ ದಂತ ಚಿಕಿತ್ಸಾ ವಿಭಾಗದ ಪ್ರೊಫೆಸರ್ ಡಾ. ಬೃಜೇಶ್ ಶೆಟ್ಟಿ ಹಾಗೂ ಕಾಲೇಜಿನ ಆಡಳಿತ ಪರಿಷತ್ ಸದಸ್ಯ ಡಾ. ಮನೋಜ್ ಕುಮಾರ್ ಎ.ಡಿ. ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ವಜಿದಾ ಬಾನುರವರು ಕಾರ್ಯಕ್ರಮವನ್ನು ನಿರೂಪಿಸಿದರು.