ಸುಳ್ಯ ಸಿ.ಎ. ಬ್ಯಾಂಕ್ : ಗೊಬ್ಬರ ಖರೀದಿಯ ಕೃಷಿಕರಿಗೆ ನೀಡಲಾದ ಲಕ್ಕಿ ಕೂಪನ್ ಡ್ರಾ : ಫಲಿತಾಂಶ

0

ಮೂವರು ಕೃಷಿಕರಿಗೆ ಯಂತ್ರೋಪಕರಣದ ಬಹುಮಾನ

ಸುಳ್ಯ ಸಿ.ಎ. ಬ್ಯಾಂಕ್ ನಲ್ಲಿ 1000 ರೂ.ಗಳಿಗೆ ಮೇಲೆ ಗೊಬ್ಬರ ಖರೀದಿಸುವ ಕೃಷಿಕರಿಗೆ ಆಯೋಜಿಸಲಾದ ಲಕ್ಕಿ ಕೂಪನ್ ನ ಡ್ರಾ ಎ.10ರಂದು ಸಿ.ಎ. ಬ್ಯಾಂಕ್ ವಠಾರದಲ್ಲಿ ನಡೆಯಿತು.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ಕೂಪನ್ ಡ್ರಾ ನಡೆಸಿಕೊಟ್ಟರು. ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ‌ನಡೆಯಿತು. ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ, ನಿರ್ದೇಶಕರಾದ ವಾಸುದೇವ ಪುತ್ತಿಲ, ಪ್ರಬೋದ್ ಶೆಟ್ಟಿ ಮೇನಾಲ, ಕೇಶವ ಸಿ.ಎ., ಹೇಮಂತ್ ಕುಮಾರ್ ಕಂದಡ್ಕ, ಮಾಜಿ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ, ದಾಮೋದರ ಮಂಚಿ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಜಿ. ನಾಯಕ್, ಸಿ.ಎ. ಬ್ಯಾಂಕ್ ಸಿಬ್ಬಂದಿಗಳು ಮೊದಲಾದವರಿದ್ದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಕಾರ್ಯಕ್ರಮ ನಿರ್ವಹಿಸಿದರು.

ಮೂರು ಬಹುಮಾನವನ್ನು ಕೃಷಿಕರಿಗೆ ಆಯೋಜಿಸಲಾಗಿದ್ದು ಪ್ರಥಮ – 10191, ದ್ವಿತೀಯ 15303, ತೃತೀಯ 3492 ಟಿಕೆಟ್ ಆಯ್ಕೆಯಾಯಿತು.‌

ಎ.12ರಂದು ಸಿ.ಎ. ಬ್ಯಾಂಕ್ ನ ಶತಮಾನೋತ್ತರ ದಶಮಾನೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.