ಸುಳ್ಯದ ನಾವೂರು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಇಂದು ರಾತ್ರಿ ಶ್ರೀ ದುರ್ಗಾ ಪೂಜೆಯು ನೆರವೇರಿತು.

ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿ ಮೊಕ್ತೇಸರಪಿ.ಕೆ.ಉಮೇಶ್, ಸದಸ್ಯರಾದ ಚಂದ್ರಶೇಖರ ಸೆಂಚುರಿ ಸುಳ್ಯ, ಭಾಸ್ಕರ ಐಡಿಯಲ್,ಸೋಮನಾಥ ಪೂಜಾರಿ,ಕೇಶವ ನಾಯಕ್ , ಹರೀಶ್ ಬೂಡುಪನ್ನೆ, ಪ್ರಕಾಶ್ ಹೆಗ್ಡೆ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಕಿಶೋರಿ ಶೇಟ್ ಸುಳ್ಯ ಹಾಗೂ ದೈವಸ್ಥಾನದ ಪೂಜಾರಿ ಮೋನಪ್ಪ ಗೌಡ, ತಿಮ್ಮಪ್ಪ ಗೌಡ ನಾವೂರು ಮತ್ತು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯು ನಡೆಯಿತು.

ದೈವಜ್ಞರು ಅಷ್ಟಮಂಗಲ ಚಿಂತನೆ ಇರಿಸಿ ಸೂಚಿಸಿದಂತೆ ದೇಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ಎ.12 ರಂದು ಬೆಳಗ್ಗೆ ದೈವಸ್ಥಾನದಲ್ಲಿ ಗಣಪತಿ ಹವನವಾಗಿ ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ, ನವಕ ಕಲಶವು ನೆರವೇರಲಿದೆ.
ಬಳಿಕ ದೈವಸ್ಥಾನದ ಜೀರ್ಣೋದ್ಧಾರದ ಸಲುವಾಗಿ ಭಕ್ತಾದಿಗಳಿಂದ ನಿಧಿ ಕುಂಭ ಸಮರ್ಪಣೆ ಯಾಗಲಿರುವುದು.