ಮಕ್ಕಳಲ್ಲಿ ಓದುವ ಅಭಿರುಚಿ ಹೆಚ್ಚಿಸಿ : ಡಾ. ಪ್ರಭಾಕರ ಶಿಶಿಲ ಕರೆ
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಎ. 12 ರಂದು ಉದ್ಘಾಟನೆಗೊಂಡಿತು.

ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಬಿ.ಪ್ರಭಾಕರ ಶಿಶಿಲರು ಶಿಬಿರ ಉದ್ಘಾಟಿಸಿ ಮಾತನಾಡಿ, “ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದರೊಂದಿಗೆ ಮಕ್ಕಳನ್ನು ಸಂಪತ್ತಾಗಿ ಪರಿವರ್ತಿಸಿ” ಎಂದು ಶುಭ ಹಾರೈಸಿದರು.

ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ್, ದಾಮಾಯಣ ಚಲನಚಿತ್ರ ಖ್ಯಾತಿಯ ನಟ, ನಿರ್ದೇಶಕ ಶ್ರೀಮುಖ ಸುಳ್ಯ ಹಾಗೂ ಭಾವ ತೀರ ಯಾನ ಚಲನಚಿತ್ರದ ನಿರ್ದೇಶಕ ,ಸಂಗೀತ ಸಂಯೋಜಕ ಮಯೂರ್ ಅಂಬೆಕಲ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಇದೇ ಸಂದರ್ಭ ರಂಗಮನೆ ವತಿಯಿಂದ ಶ್ರೀಮುಖ ಸುಳ್ಯ ಮತ್ತು
ಮಯೂರ್ ಅಂಬೆಕಲ್ಲುರವರನ್ನು
ಗೌರವಿಸಲಾಯಿತು.
ವೇದಿಕೆಯಲ್ಲಿ ರಂಗ ತಂತ್ರಜ್ಞ ಮಧುಸೂಧನ್, ರಂಗಮನೆಯ ಸದಸ್ಯರಾದ ರವೀಶ್ ಪಡ್ಡoಬೈಲು, ಡಾ. ವಿದ್ಯಾ ಶಾರದಾ, ಲತಾ ಮಧುಸೂಧನ್, ವಿನೋದಿನಿ ರೈ ಉಪಸ್ಥಿತರಿದ್ದರು.
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಡಾ. ಜೀವನ್ ರಾಮ್ ಸುಳ್ಯ ಸ್ವಾಗತಿಸಿದರು.
ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು ಕಾರ್ಯಕ್ರಮ ನಿರೂಪಿಸಿ, ಶ್ರೀಹರಿ ಪೈಂದೋಡಿ ವಂದಿಸಿದರು.