
ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಪೊರ್ಲುದ ಕೊರಗಜ್ಜ ತುಳು ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆಯು ಎ.13 ರಂದು ನಡೆಯಿತು.
ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಪ್ರಾರ್ಥಿಸಿದರು. ಧರ್ಮದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ ಸೆಂಚುರಿ ಯವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿ ಸದಸ್ಯರಾದ ಸೋಮನಾಥ ಪೂಜಾರಿ, ಕೇಶವ ನಾಯಕ್ ಸುಳ್ಯ, ಹರೀಶ್ ಬೂಡುಪನ್ನೆ, ಪೂಜಾರಿ ಮೋನಪ್ಪ ಗೌಡ ಹಾಗೂ ನಾರಾಯಣ ಶಾಂತಿನಗರ, ಜಗದೀಶ್ ಪಡ್ಡಂಬೈಲು, ಹಿರಿಯರಾದ ಕುಮಾರ ಕೆ.ಆಚಾರ್ಯ, ಶ್ರೀಮತಿ ಶಾರದಾ, ಶ್ರೀಮತಿ ಅನುಪಮಾ ಮತ್ತು ಮನೆಯವರು ಉಪಸ್ಥಿತರಿದ್ದರು. ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಸುಳ್ಯದ ಪರಶಿನಿ ಜ್ಯುವೆಲ್ಲರ್ಸ್ ಮಾಲಕ ಭಾಸ್ಕರ ಕೆ.ಆಚಾರ್ಯ ರವರ ನಿರ್ಮಾಣ ಮತ್ತು ಸಂಯೋಜನೆಯಲ್ಲಿ ಕು.ಕಾವ್ಯ ಗಣೇಶ್ ಆಚಾರ್ಯ ಸುಳ್ಯ ಮತ್ತು ಭಾಸ್ಕರ ಆಚಾರ್ಯ ಕೆ. ಗೀತೆಯನ್ನುಹಾಡಿರುತ್ತಾರೆ. ಗಾಯಕ ಗಣೇಶ್ ಆಚಾರ್ಯ ಸುಳ್ಯ ನಿರ್ದೇಶಿಸಿ,ಗಾಯಕ ಮಿಥುನ್ ರಾಜ್ ವಿದ್ಯಾಪುರ ರವರ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಪುತ್ತೂರಿನಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ.
ಗಣೇಶ್ ಮ್ಯೂಸಿಕಲ್ ಯೂ ಟ್ಯೂಬ್ ಚಾನೆಲ್ ಮೂಲಕ ಪ್ರಸಾರವಾಗಲಿದೆ.