
ಕುತ್ಕುಂಜ ಗ್ರಾಮದ ಕಿನ್ನಿಕುಮೇರಿ
ಶೇಷಮ್ಮ ಅವರಿಗೆ ಶನಿವಾರ ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ವಟಾರದಲ್ಲಿ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆ ನಡೆಯಿತು.

ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಶೇಶಮ್ಮ ಅವರ ಪುತ್ರರಾದ ಕರುಣಾಕರ ಎಣ್ಣೆ ಮಜಲು, ವಿಶ್ವನಾಥ ಎಣ್ಣೆ ವಜಲ್, ಮೃತರ ಅಳಿಯ ಏನೆಕಲ್ ಪ್ರಗತಿಪರ ಕೃಷಿಕ ಮನೋಹರ ನಾಳ, ಬೆಂಗಳೂರಿನ ನಿವೃತ್ತ ಜಡ್ಜ್ ಶಿವರಾಮ ಕೇವಳ ಅವರು ಮೃತ ರಿಗೆ ನುಡಿನಮನ ಸಲ್ಲಿಸಿದರು. ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಶೇಷಮ್ಮ ಅವರು ಕಷ್ಟದಿಂದ ಬೆಳೆದು ಬಂದ ರೀತಿ, ಅವರ ಕುಟುಂಬದ ಮಾಹಿತಿ ಗಳನ್ನು ನುಡಿನಮನದೊಂದಿಗೆ ಸಭೆಗೆ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಶೇಶಮ್ಮ ಅವರ ಪುತ್ರ ಮೋಹನ್ದಾಸ್ ಎಣ್ಣೆ ಮಜಲ್ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ನೇಮಿಚಂದ್ರ ಎಣ್ಣೆ ಮಜಲ್, ಮಾಗಣೆ ಗೌಡರುಗಳಾದ ಭಾಸ್ಕರ್ ಗೌಡ ಚಿದ್ಗಲ್, ಉದಯಕುಮಾರ ಬಾನಡ್ಕ, ಹಾಗೂ ನಾಗೇಶ್ ತೆಂಕಪಾಡಿ ಮೃತರ ಮಗಳು ರೂಪ ಮನೋಹರ್ ನಾಳ ಕುಟುಂಬಸ್ಥರು, ಸೊಸೆಯಂದಿರು , ಮೊಮ್ಮಕ್ಕಳು ಹಾಜರಿದ್ದರು.