Home Uncategorized ಪೆರಾಜೆ : ಮಜಿಕೋಡಿ ಸಮೀಪ ಸಿಡಿಲಿಗೆ ಹೊತ್ತಿ ಉರಿದ ಮರ!!…ರಸ್ತೆ ವ್ಯವಸ್ಥೆಯಿಲ್ಲದೇ ವಾಪಾಸ್ ತೆರಳಿದ ಅಗ್ನಿಶಾಮಕ...

ಪೆರಾಜೆ : ಮಜಿಕೋಡಿ ಸಮೀಪ ಸಿಡಿಲಿಗೆ ಹೊತ್ತಿ ಉರಿದ ಮರ!!…ರಸ್ತೆ ವ್ಯವಸ್ಥೆಯಿಲ್ಲದೇ ವಾಪಾಸ್ ತೆರಳಿದ ಅಗ್ನಿಶಾಮಕ ವಾಹನ!…ಬೆಂಕಿ ನಂದಿಸಲು ಊರಿನ ಯುವಕರ ನಿರಂತರ ಕಾರ್ಯಚರಣೆ

0

ಪೆರಾಜೆಯ ಮಜಿಕೋಡಿ ಎಂಬಲ್ಲಿ ಮೊನ್ನೆ ಸಂಜೆ ಮರಕ್ಕೆ ಸಿಡಿಲು ಬಡಿದ ಘಟನೆ ವರದಿಯಾಗಿದ್ದು ನಂತರ ಅದೇ ಮರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಮರದಲ್ಲಿ ಬೆಂಕಿ ಕಂಡ ಸ್ಥಳೀಯರು ಸುಳ್ಯ ಅಗ್ನಿ ಶಾಮಕ ದಳದವರಿಗೆ ವಿಷಯ ತಿಳಿಸಿದ ಮೇರೆಗೆ ಅಗ್ನಿ ಶಾಮಕ ದಳದ ವಾಹನ ಆಗಮಿಸಿದ್ದು,
ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನ ಹೋಗಲು ಸಾಧ್ಯವಾಗದಿರುವುದರಿಂದ ಮತ್ತೆ ಹಿಂತಿರುಗಬೇಕಾಯಿತು. ನಂತರ ಊರಿನ ಯುವಕರ ಸತತ ಕಾರ್ಯಚರಣೆಯ ಮೂಲಕ ಇಂದು ಬೆಳಿಗ್ಗಿನ ಜಾವ ೪ ಗಂಟೆ ಸುಮಾರಿಗೆ ಬೆಂಕಿಯನ್ನು ನಂದಿಸಿದರು.

ಕಾರ್ಯಚರಣೆಯಲ್ಲಿ ಮನು ಪೆರುಮುಂಡ ಕಿರಣ್ ಕುಂಬಳಚೇರಿ, ಪ್ರಸಾದ್ ಪಾಣತ್ತಿಲ, ಯತಿಶ್ಯಾಂ ಕುಂಬಳಚೇರಿ, ಹೇಮಕುಮಾರ್ ಕುಂಬಳಚೇರಿ
ಶರತ್ ಬೊಳುಂಜ, ನಕುಲ ಕೊಳಂಗಾಯ, ದರಣೀಶ್ ಏಣಾವರ, ಧನುರಾಜ್ ನಿಡ್ಯಮಲೆ, ಮಿಥುನ ಮಜಿಕೋಡಿ, ಹರ್ಷಿತ್ ಮಜಿಕೋಡಿ, ಗಂಗಾಧರ ನೆಕ್ಕಿಲ
ಪುನೀತ್ ನೆಕ್ಕಿಲ ಭಾಗವಹಿಸಿದ್ದರು.

NO COMMENTS

error: Content is protected !!
Breaking