ಏನೆಕಲ್ಲು ಗ್ರಾಮದ ಬಾನಡ್ಕ- ಬೋಳಡ್ಕ ಸೈನಿಕ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರಾದ ನಿವೃತ್ತ ಸುಬೇದಾರ್ ಮೇಜರ್ ಬಿ.ಆರ್.ವಾಸುದೇವ ಬಾನಡ್ಕ ಮತ್ತು ಇತರರು ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ಮನವಿ ಮಾಡಿದ್ದಾರೆ.

ಎ.15 ರಂದು ಸಂಸದರು ಈ ಸೈನಿಕ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು.ಆ ಸಂದರ್ಭದಲ್ಲಿ ವಾಸುದೇವ ಬಾನಡ್ಕ ರಸ್ತೆಯ ಅಭಿವೃದ್ಧಿ ಯ ಅವಶ್ಯಕತೆ ಯ ಬಗ್ಗೆ ವಿವರಿಸಿದರು.
ಶಾಸಕಿ ಕುl ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ,ವಿನಯಕುಮಾರ್ ಕಂದಡ್ಕ,ಶಿವಪ್ರಸಾದ್ ನಡುತೋಟ,ಕಿಶೋರ್ ಶೀರಾಡಿ, ಶೂರಪ್ಪ ಗೌಡ ಬಾಲಾಡಿ,ಗಿರಿಯಪ್ಪ ಗೌಡ ಬಾಲಾಡಿ,ಸುಬೇದಾರ್ ಹೊನ್ನಪ್ಪ ಗೌಡ ಕಟ್ಟ,ಹವಾಲ್ದಾರ್ ಕುಸುಮಾಧರ,ಭವಾನಿಶಂಕರ ಪೂಂಬಾಡಿ,ಉದಯಕುಮಾರ್ ಬಾನಡ್ಕ, ಶಿವರಾಮ ಬಾನಡ್ಕ, ಗಿರಿಯಪ್ಪ ಗೌಡ ಬಾನಡ್ಕ, ತೀರ್ಥಪ್ರಸಾದ್ ಬಾನಡ್ಕ,ಕಾರ್ಯಪ್ಪ ಪೂಜಾರಿಮನೆ, ವಿಶ್ವನಾಥ ಪೂಜಾರಿಮನೆ, ದಯಾನಂದ ಕುಕ್ಕಪ್ಪನ ಮನೆ,ರಜಿತ್ ಕುಕ್ಕಪ್ಪನ ಮನೆ, ಜಯಂತ ಎಡಮಂಗಲ,ಹಾಗೂ ಫಲಾನುಭವಿಗಳು, ಮೊದಲಾದವರು ಉಪಸ್ಥಿತರಿದ್ದರು.