ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ : ಫ್ರೀಡಂ ಸ್ಕ್ವೇರ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವರ್ಷಂಪ್ರತಿ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಎಸ್.ಕೆ.ಎಸ್.ಎಸ್.ಎಫ್ ಆಯೋಜಿಸುವ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ವಲಯಾಧ್ಯಕ್ಷರಾದ ಅಬ್ದುಲ್ಲ ಫೈಝಿ ಪೈಂಬಚ್ಚಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು ಖತೀಬ್ ಬಹು ಇಸ್ಹಾಕ್ ಬಾಖವಿ ದುವಾ ನೇತೃತ್ವ ವಹಿಸಿದರು. ಎನ್.ಪಿ.ಎಂ ಸಯ್ಯಿದ್ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸಿದರು.

ಮುಖ್ಯ ಪ್ರಭಾಷಣ ಎಸ್.ಕೆ.ಎಸ್.ಎಸ್.ಎಫ್ ದ.ಕ ಜಿಲ್ಲಾ ಒರ್ಗಾನೆಟ್ ಚೇರ್ಮನ್ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ನಡೆಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಅರಂತೋಡು ಪಿ.ಡಿ.ಒ ಜಯಪ್ರಕಾಶ್ ಎಂ.ಆರ್, ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಬಶೀರ್ ಅರಂಬೂರು ಮಾತನಾಡಿ ಶುಭಹಾರೈಸಿದರು.

ಭಾರತ ಸೇನೆಯಲ್ಲಿ ಸೇವೆಯಲ್ಲಿರುವ ಸಿ.ಆರ್.ಪಿ.ಎಫ್ ಇನ್ಸ್ಪೆಕ್ಟರ್ ಅನ್ವರ್ ಪೇರಡ್ಕ ಮತ್ತು ನಿವೃತ ಸೈನಿಕ ಪಸಿಲು ಅರಂತೋಡು ರವರನ್ನು ಸನ್ಮಾನಿಸಲಾಯಿತು.

“ಸಮಾನತೆ, ಸ್ವಾತಂತ್ರ್ಯ,ಸಹೋದರತೆ; ಭಾರತದ ಪರಂಪರೆಯನ್ನು ಉಳಿಸೋಣ” ಶೀರ್ಷಿಕೆಯಲ್ಲಿ ಪ್ರತಿಜ್ಞೆ ನಡೆಸಲಾಯಿತು.

 

ಕೋಮು ಸೌಹಾರ್ದತೆ ಉಳಿಸೋಣ: ಟಿ.ಎಂ ಶಹೀದ್

ಧರ್ಮವನ್ನು ಅದರ ಅಕ್ಷರಾರ್ಥದಲ್ಲಿ ಚೆನ್ನಾಗಿ ಅರಿತವನು ಯಾವತ್ತೂ ಇತರ ಧರ್ಮಿಯರನ್ನು ದ್ವೇಷಿಸಲಾರ. ಕೊಲ್ಲುವುದು ಇಸ್ಲಾಮಿನ ಸಂಸ್ಕೃತಿ ಅಲ್ಲ, ಇಸ್ಲಾಮಿನ ಹೆಸರಿನಲ್ಲಿ ಕೊಲ್ಲುವವರನ್ನು ಸಮಾಜ ಭಹಿಷ್ಕರಿಸಬೇಕು. ಎಸ್.ಕೆ.ಎಸ್.ಎಸ್.ಎಫ್ ಕಾರ್ಯಕರ್ತರು ಕೊಲೆಗಡುಕರಾಲು ಅಥವಾ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಎಸ್.ಕೆ.ಎಸ್.ಎಸ್.ಎಫ್ ಕೋಮು ಸೌಹಾರ್ದತೆಗಾಗಿ ದುಡಿಯುವ ಸಂಘಟನೆಯಾಗಿದೆ.

ರಾಜಕೀಯವು ಮಾನವೀಯ ಸಂಬಂಧಗಳನ್ನು ಕಸಿಯದಿರಲಿ : ಶಿವಾನಂದ ಕುಕ್ಕುಂಬಳ್ಳ

ವಿವಿಧತೆಯಲ್ಲಿ ಏಕತೆ ಎಂಬುದೇ ಭಾರತದ ಸೌಂದರ್ಯ. ಭಿನ್ನವಾದ ವಿಚಾರಧಾರೆ ಚಿಂತನೆಗಳಿರುವ ಬೇರೆ ಬೇರೆ ಪಕ್ಷದಲ್ಲಿ ತೊಡಗಿಸಿಕೊಂಡರೂ ಅವರೊಳಗಿನ ಮಾನವೀಯ ಸಂಬಂಧಗಳು ಕುಂಠಿಯವಾಗುವುದಿಲ್ಲ. ಇಷ್ಟು ಸೌಹಾರ್ದಯುತವಾದ ಸಂಪತ್ಭರಿತವಾದ ದೇಶ ಪ್ರಪಂಚದಲ್ಲಿ ಬೇರೊಂದಿಲ್ಲ ಅನ್ನುವುದು ಸ್ಪಷ್ಟ.

ಮದ್ರಸಗಳು ಸ್ವಾತಂತ್ರ್ಯ ಹೋರಾಟ ಕೇಂದ್ರಗಳು: ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ

ಮದ್ರಸಗಳು ಭಯೋತ್ಪಾದನೆಯ ಕೇಂದ್ರಗಳೆಂದು ಅಪಪ್ರಚಾರ ನಡೆಸುವವರು ತಿಳಿಯಬೇಕು ಭಾರತೀಯ ಮುಸ್ಲಿಮರು ದೇಶಪ್ರೇಮನ್ನು ಕಲಿತದ್ದು ಮದ್ರಸದಿಂದ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿದ್ದು ಮದ್ರಸಗಳಿಂದ. ಹಲವಾರು ಧಾರ್ಮಿಕ ಪಂಡಿತರು, ಉಲಮಾಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದು ಚರಿತ್ರೆ ಪುಟಗಳಲ್ಲಿ ಸ್ಥಾನ ಹಿಡಿದಿದೆ.

ಸೌಹಾರ್ದತೆಯ ಸಂದೇಶ ಸಾರುವ ಎಸ್.ಕೆ.ಎಸ್.ಎಸ್.ಎಫ್ ನಡೆಸುವ ಫ್ರೀಡಂ ಸ್ಕ್ವೇರ್ ಕಾರ್ಯಕ್ರಮ ಶ್ಲಾಘನಿಯ : ಜಯಪ್ರಕಾಶ್ (ಪಿ.ಡಿ.ಓ)

ಕಾರ್ಯಕ್ರಮದಲ್ಲಿ ಅರಂತೋಡು ಜಮಾತ್ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ, ರಿಯಾಜ್ ಫೈಝಿ ಪೇರಡ್ಕ, ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್, ಸಜ್ಜನ ಪ್ರತಿಷ್ಠಾನದ ಡಾ. ಉಮ್ಮರ್ ಬೀಜದಕಟ್ಟೆ, ಸುಳ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ, ಎಸ್. ಸಂಶುದ್ದೀನ್, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಹಾಜಿ ಎಸ್.ಎ ಹಮೀದ್ ಸುಳ್ಯ, ಹಾಜಿ ಅಬ್ಬಾಸ್ ಸಾಂಟ್ಯಾರ್, ಹಾಜಿ ಯು.ಹೆಚ್ ಅಬೂಬಕ್ಕರ್ ಮಂಗಳ, ಹಾಜಿ ಅಬ್ದುಲ್ ಖಾದರ್ ಬಯಂಬಾಡಿ, ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಬೆಳ್ಳಾರೆ, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ,ಯು.ಪಿ ಬಶೀರ್, ಅಬ್ದುಲ್ ರಜಾಕ್ ಕರಾವಳಿ, ಇಕ್ಬಾಲ್ ಸುಳ್ಯ ಅನ್ವರುಲ್ ಹುದಾ ಅಧ್ಯಕ್ಷ ಅಬ್ದುಲ್ ಮಜೀದ್, ರಫೀಕ್ ಬೆಳ್ಳಾರೆ, ಅಬ್ದುಲ್ ಖಾದರ್ ನೆಲ್ಯಡ್ಕ, ಆಶಿಕ್ ಅರಂತೋಡು ಉಪಸ್ಥಿತರಿದ್ದರು.

ವಲಯ ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ ಸ್ವಾಗತಿಸಿ ವಂದಿಸಿದರು, ವಿಖಾಯ ಚೇರ್ಮನ್ ಕಲಂದರ್ ಎಲಿಮಲೆ ನಿರೂಪಿಸಿದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.