ಸುಳ್ಯದಲ್ಲಿ ಪ್ರಥಮವಾಗಿ ರಿಬ್ಬನ್ ಹೇರ್ ಅಕ್ಸಸರೀಸ್ ಶಾಪ್ ಶುಭಾರಂಭ

0
182

 

 

ಸುಳ್ಯದ ಮುಖ್ಯ ಪೇಟೆಯ ಕಲ್ಯಾಣ್ ಟೆಕ್ಸ್ಟ್ ಟೈಲ್ಸ್ ಬಳಿ ರಿಬ್ಬನ್ ಹೇರ್ ಅಕ್ಸಸರೀಸ್ ಎಂಬ ನೂತನ ವ್ಯಾಪಾರ ಮಳಿಗೆಯು ಅ.3 ರಂದು ಶುಭಾರಂಭ‌ಗೊಂಡಿತು. ಕೃಷ್ಣ ಕ್ಲಿನಿಕ್ ನ ವೈದ್ಯರಾದ ಡಾ.ಕೇಶವ ಪಿ.ಕೆ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು ‌.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನ.ಪಂ.ಸದಸ್ಯ ವೆಂಕಪ್ಪ ಗೌಡ , ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ , ನ.ಪಂ.ಮಾಜಿ ಸದಸ್ಯ ಕೆ‌.ಎಂ.ಮುಸ್ತಾಫ,
ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಹರಿಣಿ ಸದಾಶಿವ, ಇನ್ನರ್ ವ್ಹೀಲ್ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷೆ ಜಯಮಣಿ ಮಾದವ, ಕಾಂಪ್ಲೆಕ್ಸ್ ಮಾಲಕರಾದ ಭಾರತಿ, ಗೀತಾಶ್ರೀ,ಕಿರಣ್,
ಅಶ್ರಫ್ ತಾಹಿರಾ, ಸಿದ್ದಿಕ್ ಕಟ್ಟೆಕ್ಕಾರ್, ಉಮ್ಮರ್, ಯಾಸೀನ್ ಹಳೆಗೇಟು, ಜುನೈದ್ ಕಟ್ಟೆಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು. ಮಾಲಕ ಮುಸ್ತಫಾ ಕಮ್ಮಾಡಿ ಸ್ವಾಗತಿಸಿದರು. ತಾಹಿರಾ ಸಿಲ್ಕ್ಸ್ ಮಾಲಕ ಶಾಫಿ‌ ಕುತ್ತಮೊಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿ ಪೂರ್ಣಿಮಾ ಸಹಕರಿಸಿದರು.
ಸುಳ್ಯದಲ್ಲಿ ಈ ಮಳಿಗೆಯು ಪ್ರಥಮವಾಗಿ ಶುಭಾರಂಭಗೊಳ್ಳುತ್ತಿದ್ದು ಇಲ್ಲಿ ಮಹಿಳೆಯರ ಹಾಗೂ ಮಕ್ಕಳ ಕೇಶ ವಿನ್ಯಾಸಕ್ಕೆ ಬೇಕಾದ ಉತ್ತಮ ಗುಣಮಟ್ಟದ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದರು.

LEAVE A REPLY

Please enter your comment!
Please enter your name here