ಪಂಜ ವನಿತಾ ಸಮಾಜದ ವತಿಯಿಂದ ಓಣಂ ಆಚರಣೆ

0

 

ಪಂಜ ವನಿತಾ ಸಮಾಜದ ವತಿಯಿಂದ ಓಣಂ ಸಂಭ್ರಮಾಚರಣೆ ನಡೆಯಿತು.
ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ’ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಕಾರ್ಯದರ್ಶಿ ಪದ್ಮಯ್ಯ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.


ಪೂರ್ವಾಧ್ಯಕ್ಷೆ ಅಧ್ಯಕ್ಷೆ ಶ್ರೀಮತಿ ಹೇಮಲತಾ ಜನಾರ್ದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶೇಷ ಆಕರ್ಷಣೆಯಾಗಿ ವನಿತಾ ಸಮಾಜದ ಸದಸ್ಯರಿಂದ ತಿರುವಾದಿರಕ್ಕಳಿ ನೃತ್ಯ ನಡೆಯಿತು. ಆಕರ್ಷಕ ಪೂಕಳಂ ರಚಿಸಿ, ಓಣಂ ಸೀರೆಯುಟ್ಟು ಸಂಭ್ರಮಿಸಿದರು. ಮಧ್ಯಾಹ್ನ ಓಣಂ ಸದ್ಯ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯದರ್ಶಿ ಶ್ರೀಮತಿ ಭಾಗೀರಥಿ ಕರಿಕ್ಕಳ ವಂದಿಸಿದರು.