ಕಳಂಜ ಗ್ರಾಮ ಪಂಚಾಯತ್ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಹುದ್ದೆಯಲ್ಲಿದ್ದ ತಿರುಮಲೇಶ್ವರ ಮುಂಡುಗಾರು ಅವರು ಗ್ರೇಡ್ 2 ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಇವರು
ಕಳೆದ 25 ವರ್ಷಗಳಿಂದ ಕಳಂಜ ಗ್ರಾ.ಪಂ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಐವರ್ನಾಡು ಗ್ರಾ.ಪಂ ನಲ್ಲಿ ಕಾರ್ಯದರ್ಶಿಯಾಗಿ ಮಾ.14 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಕಳಂಜ ಗ್ರಾಮದ ಕೋಟೆಮುಂಡುಗಾರು ಚಿನಪ್ಪ ಗೌಡ ಮತ್ತು ಲೀಲಾವತಿ ದಂಪತಿಗಳ ಪುತ್ರ. ಇವರ ಪತ್ನಿ ಶ್ರೀಮತಿ ವಾಣಿ.