ಉಪನ್ಯಾಸಕಿ ಶ್ರೀಮತಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ

0

ಉಪನ್ಯಾಸಕಿ ಶ್ರೀಮತಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಜೂನ್ 10 ರಂದು ಅನುಗ್ರಹ ಕಾಲೇಜಿನಲ್ಲಿ ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ಟಿ.ಪಿ.ರಮೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಲೀಲಾಕುಮಾರಿಯವರ ಸಾಹಿತ್ಯ ಚಟುವಟಿಕೆಗಳನ್ನು ಕಳೆದ ಹತ್ತು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ಕೊಡಗಿನ ಅತ್ಯಂತ ಚಿಕ್ಕ ಗ್ರಾಮವಾದ ಚೆಂಬು ಗ್ರಾಮ ಅತಿ ಹೆಚ್ಚು ಕವಿಗಳನ್ನು ಕೊಟ್ಟ ಗ್ರಾಮ ಎನ್ನುತ್ತಾ ಲೀಲಾಕುಮಾರಿ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ರವರು ಪುಸ್ತಕ ಮುಖಪುಟದ ಪರದೆ ಸರಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿ, ಲೀಲಾಕುಮಾರಿ ಕೊಡಗಿನ ಸಾಹಿತ್ಯ ಚಟುವಟಿಕೆಗಳಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಹನಹನಿ ಇಬ್ಬನಿ ಪುಸ್ತಕ ಪರಿಚಯವನ್ನು ಚಿತ್ರಕಲಾ ಶಿಕ್ಷಕರಾದ ಉ.ರಾ ನಾಗೇಶರವರು ಡುಂಡಿರಾಜ್ ಮಾಡಿದರು.

ಮುಖ್ಯ ಅತಿಥಿಯಾಗಿ ಫ್ಯಾನ್ಸಿ ಮುತ್ತಣ್ಣ, ಅತಿಥಿ ಶಿಕ್ಷಕಿ ಹಾಗೂ ಸಾಹಿತಿ ಸುನೀತ ಕುಶಾಲನಗರ, ಅನುಗ್ರಹ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ನಾಗೇಂದ್ರ ಬಾಬು ಆಗಮಿಸಿದ್ದರು.

ಸಮಾರಂಭಧ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಂಡರಿನಾಥ ನಾಯ್ಡುರವರು ವಹಿದ್ದರು. ವೇದಿಕೆಯಲ್ಲಿ ಅನುಗ್ರಹ ಎಜುಕೇಶನಲ್ ಟ್ರಸ್ಟ್ ನ ಸಹಕಾರ್ಯದರ್ಶಿ ಚಂದ್ರಶೇಖರರವರು ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಸೀಮಾರವರು ಲೇಖಕಿಯ ಪರಿಚಯ ಮಾಡಿದರು. ಕಾಲೇಜಿನ ವಿದ್ಯಾರ್ಥಿ ವಿನಯ ಪ್ರಕಾಶ್ ಪ್ರಾರ್ಥಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ನೌಷದ್ ಕಾರ್ಯಕ್ರಮ ನಿರೂಪಿಸಿದರು. ಲೇಖಕಿ,‌ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಸುಳ್ಯದ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮರವರಿಂದ ಮನೋರಂಜನಾ ಕಾರ್ಯಕ್ರಮ‌ ನಡೆಯಿತು.