ಜೂ. 24 : ಪಂಜ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0

ಪಂಜ ಲಯನ್ಸ್ ಕ್ಲಬ್ ನ 2023-24 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಜೂ. 24 ರಂದು ಸಂಜೆ 7 ಗಂಟೆಗೆ ನಡ್ಕ ಶಿವಗೌರಿ ಕಲಾಮಂದಿರ, ಪಡ್ಪಿನಂಗಡಿ ಇಲ್ಲಿ ನಡೆಯಲಿದೆ.
ಲಯನ್ಸ್ ಪ್ರಥಮ ಉಪ ಜಿಲ್ಲಾಾ ರಾಜ್ಯಪಾಲೆ ಬಿ.ಎಂ.ಭಾರತಿ ಪದಗ್ರಹಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೈ.ಎಸ್.ಎಂ.(ರಿ) ಸುಳ್ಯ ಇದರ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಭಾಗವಹಿಸಲಿದ್ದಾರೆ.
ಪಂಜ ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.