ಅಲೆಕ್ಕಾಡಿ ತರವಾಡಿನಲ್ಲಿ ದೈವ ದೇವರುಗಳ ದೃಢ ಕಲಶ : ಸನ್ಮಾನ ಕಾರ್ಯಕ್ರಮ

0

ಅಲೆಕ್ಕಾಡಿ ತರವಾಡು ಜೀರ್ಣೋದ್ಧಾರಗೊಂಡು ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದು, ಜೂನ್ 20ರಂದು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ವೀರ ವೆಂಕಟ ನರಸಿಂಹ ತಂತ್ರಿಯವರ ನೇತೃತ್ವದಲ್ಲಿ ದೃಢ ಕಲಶೋತ್ಸವ ನಡೆಯಿತು.

ಧರ್ಮದೈವ, ಧೂಮಾವತಿ ದೈವ, ವನದುರ್ಗಾದೇವಿ, ನಾಗದೇವರು, ಸಹ ಪರಿವಾರದೈವಗಳಿಗೆ ಕಲಶಾಭಿಷೇಕ, ಗಣಪತಿ ಹವನ ನಡೆದು ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು.

ಸನ್ಮಾನ ಕಾರ್ಯಕ್ರಮ

ವನದುರ್ಗಾದೇವಿಯ ವಿಗ್ರಹ ರಚನೆಕಾರ ವಿಟ್ಲ ನೆಕ್ಕಿತ ಪುಣಿ ನವೀನ್ ರವರಿಗೆ ಅಲೆಕ್ಕಾಡಿನ ಹಿರಿಯರು ಹಾಗೂ ಗೌರವಾಧ್ಯಕ್ಷ ನಾಗೇಶ್ ಪೂಜಾರಿಯವರ ಮಾರ್ಗದರ್ಶನದಂತೆ ಜಯಪ್ರಕಾಶ್ ಅಲೆಕ್ಕಾಡಿ ಮದಿಪು ಮತ್ತು ಬೆಂಗಳೂರು ಉದ್ಯಮಿ ಶ್ರೀ ಲಕ್ಷ್ಮಿ ಅಸೋಸಿಯೇಟ್ಸ್, ಶ್ರೀ ಮೂಕಾಂಬಿಕಾ ಅಸೋಸಿಯೇಟ್ಸ್ ಮತ್ತು ಶ್ರೀ ಲಕ್ಷ್ಮಿ ಬಿಲ್ಡರ್ ಮತ್ತು ಡೆವಲಪರ್ ಮಾಲಕ ಸಂತೋಷ್ ಕುಮಾರ್ ಅಲೆಕ್ಕಾಡಿಯವರು ಶಾಲು ಹೊದಿಸಿ ಹಾರರ್ಪಣೆಗೈದು. ಚಿನ್ನದ ಉಂಗುರ ತೊಡಿಸಿ, ಬೆಳ್ಳಿಯ ವಿಗ್ರಹ ನೀಡಿ, ಪೇಟ ತೊಡಿಸಿ, ಗುರುತಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ತಂತ್ರಿ ಬಳಗ, ಕೊರಂಗು ತರವಾಡು ಮುಖ್ಯಸ್ಥ ಜಗನ್ನಾಥ ಪೂಜಾರಿ ಮುಕ್ಕೂರು, ಬಾಕಿಲ ಗುತ್ತು ಪ್ರಭಾಕರ ಸಾಲಿಯಾನ್ ಮೇರ್ಲ,

ಹಿರಿಯರಾದ ಕಮಲಾವತಿ, ಕುಟುಂಬಸ್ಥರು ಪದಾಧಿಕಾರಿಗಳು ಉಪಸ್ಥಿತರಿದ್ದರು.