ಪೂಜಾ ಗೌಡ ನಟಿಸಿರುವ ಆಲ್ಬಂ ಸಾಂಗ್ ” ಕೇಳೇ ಮೌನಿಯೇ” ಪೋಸ್ಟರ್ ಬಿಡುಗಡೆ

0

ಮ್ರಿವನ್ಶ್ ಫಿಲ್ಮ್ ಅರ್ಪಿಸುವ “ಕೇಳೆ ಮೌನಿಯೇ” ಕನ್ನಡ ಆಲ್ಬಂ ಸಾಂಗ್ ನ ಚಿತ್ರೀಕರಣ ಆರಂಭಗೊಂಡಿದ್ದು ಪೋಸ್ಟರ್ ರೋಶನಿ ನಿಲಯದಲ್ಲಿ ಬಿಡುಗಡೆಗೊಂಡಿತು.

ಆಲ್ಬಂ ಸಾಂಗ್ ಜುಲೈ ತಿಂಗಳಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಸಚಿನ್ ಶೆಟ್ಟಿ ಹಾಗೂ ಪಂಜದ ಪೂಜಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಹಾಡು ಅಶ್ವೀರ್ ಉಜಿರೆ ಇವರ ಧ್ವನಿಯಲ್ಲಿ ಮೂಡಿಬಂದಿದ್ದು, ಮೋಕ್ಷ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಇದರ ನಿರ್ದೇಶನ ಆಕಾಶ್ ಶೆಟ್ಟಿ ಹಾಗೂ ಕಥೆ – ಚಿತ್ರಕಥೆ ಮಹೇಶ್ ಆಚಾರ್ಯ ಇವರು ಮಾಡಿದ್ದಾರೆ.