ಬಾಳುಗೋಡು ಗ್ರಾಮದ ಕೊತ್ನಡ್ಕ ಎಂಬಲ್ಲಿ ಇಬ್ಬರ ಮೇಲೆ ಕಾಡು ಹಂದಿ ದಾಳಿ ಮಾಡಿ ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಕೊತ್ನಡ್ದದ ಬಾಬು (ಮಾವ), ಹಾಗೂ ಹರಿಣಾಕ್ಷಿ ( ಸೊಸೆ) ಸೊಪ್ಪಿಗೆಂದು ತೆರಳಿದ್ದಾಗ ಕಾಡು ಹಂದಿ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಮಹಿಳೆಯ ತೊಡೆ, ಕಾಲಿಗೆ ಗಾಯವಾಗಿದ್ದು ಬಾಬು ಅವರ ಹೊಟ್ಟೆಗೆ ಗಾಯವಾಗಿದೆ. ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ತೆರಳಿರುವುದಾಗಿ ತಿಳಿದು ಬಂದಿದೆ.