ನೆಲ್ಲೂರು ಕೆಮ್ರಾಜೆ : ಬದಲಿ ವ್ಯವಸ್ಥೆ ಮಾಡದೇ, ಜನರೇಟ್ ತೆಗೆಯಲು ಬಂದ ಏರ್ ಟೆಲ್ ಕಂಪೆನಿ

0

ಊರವರ ವಿರೋದಕ್ಕೆ ಮಣಿದು ವಾಪಾಸ್

ಬದಲಿ ವ್ಯವಸ್ಥೆ ಮಾಡದೇ ಏರ್ ಟೆಲ್ ಟವರ್ ಗೆ ಅಳವಡಿಸಿದ್ದ ಜನರೇಟ್ ತೆಗೆದು ಕೊಂಡುಹೋಗಲು ಬಂದ ಏರ್ ಟೆಲ್ ಕಂಪೆನಿಯವರನ್ನು ಊರವರು ವಿರೋಧಿಸಿ ವಾಪಾಸ್ ಕಳುಹಿಸಿದ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಎಂಬಲ್ಲಿಂದ ವರದಿಯಾಗಿದೆ.

ಮಾಪಲಕಜೆ ಎಂಬಲ್ಲಿ ಏರ್ ಟೆಲ್‌ ಕಂಪೆನಿಯ ಮೊಬೈಲ್ ಫೋನ್ ಸಂಪರ್ಕಕ್ಕೆ ಟವರ್ ಅಳವಡಿಸಲಾಗಿತ್ತು. ಹೀಗಾಗು ಈ ಭಾಗದ ಅನೇಕರು ಇತರ ಸಿಮ್‌ಕಾಡ್೯ ಗಳನ್ನು ಏರ್ ಟೆಲ್ ವರ್ಗಾಯಿಸಿದ್ದರು. ಆದರೆ ಕೆಲ ಸಮಯಗಳಿಂದ ಮಾಪಲಕಜೆ ಏರ್ ಟೆಲ್‌ ಟವರ್ ನಿಂದ ಮೊಬೈಲ್ ಫೋನ್ ಗೆ ಸಿಗುತ್ತಿದ್ದ ಸಿಗ್ನಲ್ ಗಳು ಕಡಿಮೆಯಾಗತೊಡಗಿತ್ತು. ಇದರ ಬೆನ್ನಲ್ಲೇ ಮಾಪಲಕಜೆಯ ಏರ್ ಟೆಲ್ ನ ಜನರೇಟ್ ತೆಗೆದುಕೊಂಡು ಹೋಗಲು ಕಂಪೆನಿಯಿಂದ ಬರುತ್ತಾರೆಂದು ಮಾಹಿತಿ ತಿಳಿದ ಸ್ಥಳೀಯರು ಸೇರಿ, ಜನರೇಟ್ ಕೊಂಡೊಯ್ಯಲು ಸ್ಥಳಕ್ಕೆ ಬರುತ್ತಿದ್ದ ವಾಹನಗಳನ್ನು ತಡೆದು, ಕಂಪೆನಿಯವರಿಗೆ ದೂರವಾಣಿ ಕರೆ ಮಾಡಿ‌ ಈ ಬಗ್ಗೆ ವಿಚಾರಿಸಿದರೆಂದೂ, ಅದಕ್ಕೆ ಅವರು ಸೋಲಾರ್ ಸಿಸ್ಟಮ್ ಬಳಸುವ ಬಗ್ಗೆ ಮಾಹಿತಿ‌ ನೀಡಿದರೆಂದೂ, ಅಲ್ಲಿಯವರೆಗೆ ಜನರೇಟರ್ ತೆಗೆಯದಂತೆ ಊರವರು ವಿರೋಧಿಸಿದಿಸಿದರೆಂದು ತಿಳಿದು ಬಂದಿದೆ.