ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲಾ ಪೋಷಕರ ಸಮಿತಿ ರಚನೆ

0

ಅಧ್ಯಕ್ಷರಾಗಿ ಜೆ.ಕೆ .ರೈ ಅವಿರೋಧ ಆಯ್ಕೆ

ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲಾ ಪೋಷಕರ ಸಮಿತಿ ಸಭೆಯು ಜೂ.22 ರಂದು ನಡೆಯಿತು.
ತರಗತಿವಾರು ಪೋಷಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.


ಜೂ.27 ರಂದು ಪೋಷಕ ಸಮಿತಿಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಸಮಿತಿಯ ಅಧ್ಯಕ್ಷರನ್ನಾಗಿ ಜೆ.ಕೆ .ರೈ ಸುಳ್ಯ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಸಮಿತಿಯ ಸದಸ್ಯರುಗಳಾಗಿ ಶ್ರೀಮತಿ ವನಿತಾ, ಶ್ರೀಮತಿ ಪ್ರೇಮ, ಶ್ರೀಮತಿ ವಿದ್ಯಾ, ಶ್ರೀಮತಿ ಜಾನೆಟ್ ರೋಡ್ರಿಗಸ್, ಶ್ರೀಮತಿ ವತ್ಸಲ, ವೀರೇಂದ್ರ ಕುಮಾರ್ ಜೈನ್ ಆರ್ ಬಿ, ಶಿವಕುಮಾರ್ ಶೆಟ್ಟಿ ಕೆ. ವಿ., ಕರುಣಾಕರ ಕೇನಾಜೆ, ಪುರುಷೋತ್ತಮ ಪಿ , ಅಬ್ದುಲ್ ಸಲಾಂ ,ಉದಯಕುಮಾರ್ ಕೆ , ಅಬ್ದುಲ್ ಖಾದರ್, ದಿನಕರ ಕೆ. ಇವರುಗಳು ಆಯ್ಕೆಯಾದರು.


ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರೇ. ಫಾ. ವಿಕ್ಟರ್ ಡಿಸೋಜಾ, ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ಬಿನೋಮ ಹಾಗೂ ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.