ಲಯನ್ಸ್ ಪ್ರಾಂತ್ಯಾಧ್ಯಕ್ಷರಾಗಿ ಲ. ರೇಣುಕಾ ಸದಾನಂದ ಜಾಕೆ ನೇಮಕ

0

ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಕಂದಾಯ ಜಿಲ್ಲೆಯನ್ನೊಳಗೊಂಡ ಲಯನ್ಸ್ ಜಿಲ್ಲೆ 317-ಡಿ ಇದರ ಪ್ರಾಂತ್ಯ 7 ರ ಪ್ರಾಂತ್ಯಾಧ್ಯಕ್ಷರಾಗಿ 2023-24 ನೇ ಸಾಲಿಗೆ ಲ|ರೇಣುಕಾ ಸದಾನಂದ ಜಾಕೆ ಎಂಜೆಎಫ್ ಇವರನ್ನು 2023-24 ನೇ ಸಾಲಿನ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ|ಮೆಲ್ವಿನ್ ಡಿಸೋಜಾ ಎಂಜೆಎಫ್ ರವರು ನೇಮಕಗೊಳಿಸಿದ್ದಾರೆ.

ಲಯನ್ಸ್ ಕ್ಲಬ್ ಸಂಪಾಜೆ, ಸುಳ್ಯ, ಬೆಳ್ಳಾರೆ, ಪಂಜ, ಕಡಬ, ಸುಬ್ರಹ್ಮಣ್ಯ ಮತ್ತು ಗುತ್ತಿಗಾರು ಸೇರಿದಂತೆ ಒಟ್ಟು 7 ಲಯನ್ಸ್ ಕ್ಲಬ್‌ಗಳು ಪ್ರಾಂತ್ಯ 7 ರ ವ್ಯಾಪ್ತಿಗೆ ಒಳಪಟ್ಟಿದೆ.

ಸುಳ್ಯ ಪಯಸ್ವಿನಿ ಜೇಸಿರೆಟ್ ವಿಂಗ್‌ನ ಅಧ್ಯಕ್ಷೆಯಾಗಿ, ಸುಳ್ಯ ಲಯನೆಸ್ ಕ್ಲಬ್ ಅಧ್ಯಕ್ಷೆಯಾಗಿ ಲಯನೆಸ್ ಕ್ಲಬ್ ಪ್ರಥಮ ಸ್ಥಾನದೊಂದಿಗೆ ವಿವಿಧ ಸೇವಾ ಚಟುವಟಿಕೆಗಳಲ್ಲಿ 33 ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

ಲಯನೆಸ್ ಜಿಲ್ಲಾ ರಾಜ್ಯಪಾಲರ ಕಾರ್ಯಯೋಜನೆಯ ಜಿಲ್ಲಾಧ್ಯಕ್ಷೆಯಾಗಿ, ಲಯನೆಸ್ ಜಿಲ್ಲಾ ಪಿ.ಆರ್.ಒ ಮತ್ತು ಜಿಲ್ಲಾ ಲಯನೆಸ್ ಸಂಚಿಕೆಯ ಸಂಪಾದಕಿಯಾಗಿ, ಲಯನೆಸ್ ನ ಉನ್ನತ ಹುದ್ದೆಯಾದ ಲಯನೆಸ್ ಜಿಲ್ಲಾ ಕೋ-ಆರ್ಡಿನೇಟರ್ ಆಗಿ, 2009-10 ರಲ್ಲಿ ಪ್ರತಿಷ್ಠಿತ ಸುಳ್ಯ ಲಯನ್ಸ್ ಸಂಸ್ಥೆಗೆ ಲಯನ್ ಸದಸ್ಯೆಯಾಗಿ ಸೇರ್ಪಡೆಗೊಂಡು 2016-17 ರಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷೆಯಾಗಿ ಲಯನ್ಸ್ ಜಿಲ್ಲೆ 317-ಡಿ ಯಲ್ಲಿ ಸುಳ್ಯ ಲಯನ್ಸ್ ಸಂಸ್ಥೆಯ ಎಲ್ಲಾ ಸದಸ್ಯರ ಸಹಕಾರದಿಂದ ಜಿಲ್ಲೆಯಲ್ಲಿರುವ 85 ಲಯನ್ಸ್ ಸಂಸ್ಥೆಗಳಲ್ಲಿ ಸುಳ್ಯ ಲಯನ್ಸ್ ಸಂಸ್ಥೆ ಜಿಲ್ಲೆಯಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಓವರ್ ಆಲ್ ಫಸ್ಟ್ ಬೆಸ್ಟ್ ಸೆಂಟಿನಲ್ ಕ್ಲಬ್ ಪ್ರಶಸ್ತಿಯೊಂದಿಗೆ ವಿವಿಧ ಸೇವಾ ಚಟುವಟಿಕೆಗಾಗಿ 39 ಪ್ರಶಸ್ತಿಗಳನ್ನು ಪಡೆದುಕೊಂಡಿತು. 2019-20 ರಲ್ಲಿ ಲಯನ್ಸ್ ವಲಯಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು.

ಲಯನ್ಸ್ ಸಂಸ್ಥೆಯಲ್ಲಿನ ಇವರ ಕಾರ್ಯಚಟುವಟಿಕೆ ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಇವರು ಪ್ರಸ್ತುತ ಸುಳ್ಯದ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸಲಹಾ ಸಮಿತಿಯ ಸದಸ್ಯೆಯಾಗಿರುತ್ತಾರೆ. ಶ್ರೀಮತಿ ರೇಣುಕಾ ಸದಾನಂದ ಜಾಕೆಯವರು ಹಿರಿಯ ಸಹಕಾರಿ, ಸಾಮಾಜಿಕ ಧುರೀಣ ಲಯನ್ ಜಾಕೆ ಸದಾನಂದ ಗೌಡರ ಪತ್ನಿ.