ಐವರ್ನಾಡು : ಗ್ರಾಮೀಣ ಸಂತೆ ಮಾರುಕಟ್ಟೆ ಉದ್ಘಾಟನೆ

0

ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ

ಐವರ್ನಾಡು ಗ್ರಾಮದ ಜನತೆಗೆ ಸುಲಭವಾಗಿ ಕೈಗೆ ಎಟಕುವ ದರದಲ್ಲಿ ತಯಾರಿಸಿ ಬೆಳೆಸಿದ ಉತ್ಪನ್ನಗಳ ಮಾರುಕಟ್ಟೆಯೊಂದು ಹಳ್ಳಿ ಸಂತೆ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮ ಜೂ.30 ರಂದು ನಡೆಯಿತು.


ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯರವರು ರಿಬ್ಬನ್ ಕಟ್ ಮಾಡುವ ಮೂಲಕ ನೆರವೇರಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಭವಾನಿ ಶಂಕರ್ ಮುಖ್ಯ ಅತಿಥಿಯಾಗಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು,ಪಿಡಿಒ ಶ್ಯಾಮ್ ಪ್ರಸಾದ್,ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾದಿಕಾರಿ ರವಿಪ್ರಸಾದ್ ಸಿ.ಕೆ, ಮತ್ತು ಗ್ರಾ.ಪಂ.ಸದಸ್ಯರುಗಳು, ಊರವರು,ಶಾಲಾ ಮಕ್ಕಳು ಹಾಗೂ ಒಕ್ಕೂಟದ 8 ಸಂಘಗಳ ಸದಸ್ಯೆಯರು, ವಿವಿಧ ಉತ್ಪನ್ನಗಳನ್ನು ತಯಾರಿಸಿ ಸಂತೆಯಲ್ಲಿ ಮಾರಾಟಕ್ಕೆ ಸಿದ್ಧ ಪಡಿಸಲಾಯಿತು. ಹಾಗೂ ತಾಲ್ಲೂಕು ಪಂಚಾಯತ್ ವಲಯ ಮೇಲ್ವಿಚಾರಕಿ ಶ್ರಿಮತಿ ಮೇರಿ ಮತ್ತು ಬಿ ಆರ್ ಪಿ ಜಯಲಕ್ಷ್ಮಿ ಹಾಗೂ ಐವರ್ನಾಡು ಗ್ರಾಮದ ಸಂಜೀವಿನಿ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಉಚಿತ ಆರೋಗ್ಯ ತಪಾಸಣೆ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಸಿ.ಎಚ್.ಒ ಮತ್ತು ಆಶಾಕಾರ್ಯಕರ್ತೆಯರು ಆರೋಗ್ಯ ತಪಾಸಣೆ ನಡೆಸಿದರು.