ವೈದ್ಯರ ದಿನಾಚರಣೆಯಂದು ಸುಳ್ಯಕ್ಕೊಂದು ಶುಭ ಸುದ್ದಿ

0

ಸುಳ್ಯದಲ್ಲಿ ಎಒಎಲ್‌ಇ ವತಿಯಿಂದ ಕೆವಿಜಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ

ಅತೀ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶ

ಸುಳ್ಯದಲ್ಲಿ ಹಲವಾರು ವರ್ಷಗಳ ಹಿಂದೆ ಕುರುಂಜಿ ವೆಂಕಟರಮಣ ಗೌಡರು ಸ್ಥಾಪಿಸಿದ ವಿದ್ಯಾ ಸಮುಚ್ಚಯ ಸುಳ್ಯದಲ್ಲಿ ಬಹಳ ಎತ್ತರಕ್ಕೆ ಬೆಳೆದು ಕೆಜಿ ಯಿಂದ ಪಿಜಿ ಯವರೆಗೆ ಪ್ರಾಥಮಿಕ ಶಿಕ್ಷಣ ಪದವಿ ಕಾಲೇಜು, ತಾಂತ್ರಿಕ, ಪ್ಯಾರಮೆಡಿಕಲ್, ಆಯುರ್ವೇದ, ದಂತ ವಿದ್ಯಾಲಯ, ವೈದ್ಯಕೀಯ ಮಹಾ ವಿದ್ಯಾಲಯಗಳನ್ನು ಸ್ಥಾಪಿಸಿ ಸುಳ್ಯವನ್ನು ಶಿಕ್ಷಣಕಾಶಿಯನ್ನಾಗಿ ಪರಿವರ್ತಿಸಿ ಸುಳ್ಯವನ್ನು ವಿಶ್ವ ಭೂಪಟದಲ್ಲಿ ಗುರುತಿಸಿದರು. ಇದರ 6೦೦ಕ್ಕಿಂತ ಅಧಿಕ ಹಾಸಿಗೆಯುಳ್ಳ ಆಸ್ಪತ್ರೆ ಹಾಗೂ ಕಾಲೇಜು ಸ್ಥಾಪಿಸಿ ಗ್ರಾಮಿಣ ಪ್ರದೇಶದ ಅನೇಕ ರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡುತ್ತ ಬಂದಿರುವ ಕೆವಿಜಿ ಸಂಸ್ಥೆಗಳು ಇದೀಗ ಸುಳ್ಯಕ್ಕೆ ಕೊಡುಗೆಯನ್ನು ನಿಡಲಿದ್ದಾರೆ.

ಸುಳ್ಯ ಸುಸಜ್ಜಿತ ಕ್ಯಾನ್ಸರ್ ಅಸ್ಪತ್ರೆ ನಿರ್ಮಾಣಕ್ಕೆ ತಿರ್ಮಾನ


ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯು ಗ್ರಾಮೀಣ ಪ್ರದೇಶದ ಜನರಲ್ಲಿಯೂ ಹೆಚ್ಚಾಗಿ ಕಂಡು ಬರುತ್ತಿರುವುದು ಇದಕ್ಕೆ ತಗಲುವ ವೆಚ್ಚ ದುಬಾರಿಯಾಗಿದ್ದು,ಇದರ ಚಿಕಿತ್ಸೆಗಾಗಿ ದೂರದ ನಗರ ಪ್ರದೇಶಗಳಿಗೆ ತೆರಳಬೇಕಾಗಿದೆ. ಅದ್ದರಿಂದ ಸುಳ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಬಹಳ ಹಿಂದೆಯೇ ದಿ| ಡಾ.ಕುರುಂಜಿ ವೆಂಕಟರಮಣ ಗೌಡರು ಕನಸು ಕಂಡಿದ್ದರು. ಇವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ವತಿಯಿಂದ ಸುಳ್ಯದ ಜನರಿಗೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ಒದಗಿಸುವುದಕ್ಕೋಸ್ಕರ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆಯನ್ನು ಸುಮಾರು ಅಂದಾಜು 50ಕೋಟಿ ವೆಚ್ಚದಲ್ಲಿ ಸುಳ್ಯದ ಪರಿವಾರಕಾನದಲ್ಲಿ ಸಂಸ್ಥೆಯ 12.5 ಎಕ್ರೆ ಸ್ಥಳದಲ್ಲಿ ಸ್ಥಾಪಿಸಲು ಅಕಾಡೆಮಿ ಆಡಳಿತ ಸಮಿತಿ ಸಭೆಯಲ್ಲಿ ತೀರ್ಮಾನಿಸಿದೆ ಎಂದು ಆಡಳಿತ ಸಮಿತಿಯವರು ವೈದ್ಯರ ದಿನಾಚರಣೆ ಶುಭ ಸಂದರ್ಭದಲ್ಲಿ ಪತ್ರಿಕೆಗೆ ತಿಳಿಸಿದ್ದಾರೆ.