ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಗ್ರಾ. ಪಂ. ಗುತ್ತಿಗಾರು ಗ್ರಂಥಾಲಯ ನೇತೃತ್ವ, ಸಂಘಟನೆ ಗಳ ಸಹಕಾರ
ಸ್ವಚ್ಚ ಗ್ರಾಮ ಗುತ್ತಿಗಾರು ಪರಿಕಲ್ಪನೆಯ ಟಾಸ್ಕ್ ಫೋರ್ಸ್ ಟೀಮ್ ರಚನೆ
ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಗ್ರಾ. ಪಂ. ಗುತ್ತಿಗಾರು ಗ್ರಂಥಾಲಯ, ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳನ್ನು ಸಹಕಾರದಲ್ಲಿ ಜೂ. 30 ಗುತ್ತಿಗಾರು ಪೇಟೆ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಕಾರ್ಯಕ್ರಮ ಆರಂಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಧನಪತಿ ಸ್ವಚ್ಚತೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿಯ ಎನ್. ಆರ್. ಎಲ್. ಎಂ, ಟಿ.ಪಿ.ಎಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಎಂ.ಬಿ.ಕೆ, ಎಲ್.ಸಿ.ಆರ್.ಪಿ ಗಳು, ಸಖಿ
ಗಳು. ಎಫ್ ಎಲ್ ಸಿ ಆರ್ ಪಿ ಒಕ್ಕೂಟದ ಅಧ್ಯಕ್ಷೆ, ಕಾರ್ಯದರ್ಶಿ, ಒಕ್ಕೂಟದ ಪದಾಧಿಕಾರಿಗಳು,ಸಂಘದ ಸದಸ್ಯರು, ಭಾಗವಹಿಸಿದ್ದರು.ಈ ಸಂದರ್ಭ ಒಕ್ಕೂಟದ ದೀಪ ಸಂಜೀವಿನಿ ಸಂಘದ ಸದಸ್ಯರು ಹೊಲಿದ ಬಟ್ಟೆ ಚೀಲ ವನ್ನು ಅಂಗಡಿಗಳಿಗೆ ವಿತರಣೆ ಮಾಡಲಾಯಿತು. ಕೊನೆಯಲ್ಲಿ ಕಾರ್ಯಕ್ರಮದ ಉದ್ದೇಶ ಹಾಗೂ ಮುಂದಿನ ರೂಪುರೇಷೆ ಬಗ್ಗೆ ಅಮರ ಸಂಜೀವಿನಿಯ ದಿವ್ಯಾ ಸುಜನ್ ಗುಡ್ಡೆಮನೆ ಮಾಹಿತಿ ಹಂಚಿಕೊಂಡರು.
ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ನೇತೃತ್ವದಲ್ಲಿ ಸ್ವಚ್ಚ ಗ್ರಾಮ ಗುತ್ತಿಗಾರು ಪರಿಕಲ್ಪನೆಯ ಟಾಸ್ಕ್ ಫೋರ್ಸ್ ಟೀಮ್ ರಚಿಸಲಾಯಿತು. ಮುಂದಿನ ದಿನಗಳಲ್ಲಿ ಪ್ರತಿವಾರ ಪೇಟೆಯ ಅಂಗಡಿಗಳಿಗೆ ತೆರಳಿ ವರ್ಷ ಪೂರ್ತಿ ಗುತ್ತಿಗಾರು ಪೇಟೆ ಸ್ವಚ್ಚವಾಗಿಡುವ ಬಗ್ಗೆ ಕೆಲ ನಿರ್ಣಯಗಳನ್ನು ಜಾರಿಗೊಳಿಸುವ ನಿರ್ಧಾರಕ್ಕೆ ಬರಲಾಯಿತು.
ಸ್ವಚ್ಚತಾ ಕಾರ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ವರ್ತಕರ ಸಂಘ, ಅಟೋ ರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್ ಘಟಕ ಗುತ್ತಿಗಾರು, ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು, ಅಮರ ತಾಲ್ಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ) ಗುತ್ತಿಗಾರು, ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಮತ್ತಿತರ ಸಂಘಟನೆಗಳು, ಗ್ರಾ.ಪಂ ಸದಸ್ಯರುಗಳು, ಸಿಬ್ಬಂದಿಗಳು, ಸಾರ್ವಜನಿಕರು ಕೈ ಜೋಡಿಸಿದ್ದರು.